ಮಾರುಕಟ್ಟೆಯಲ್ಲಿ ಸದಾ ಒಂದಲ್ಲಾ ಒಂದು ಬಗೆಯ ಫ್ಯಾಷನ್ (Fashion) ಡ್ರೆಸ್‌ಗಳು ಮೋಡಿ ಮಾಡುತ್ತಲೇ ಇರುತ್ತವೆ. ಈ ಬಾರಿಯ ಮಾನ್ಸೂನ್ ಸೀಸನ್‌ನಲ್ಲಿ ಹುಡುಗಿಯರಿಗೆ ಇಷ್ಟವಾಗುವಂತಹ ಡಿಸೈನ್‌ನಲ್ಲಿ ಗ್ಲ್ಯಾಮರಸ್ ಲುಕ್ ನೀಡುವಂತಹ ರೆಟ್ರೋ ಸ್ಪೆಕ್ಟ್ರಮ್ ಡ್ರೆಸ್‌ಗಳು (Retro Spectrum Dress) ಎಂಟ್ರಿ ಕೊಟ್ಟಿವೆ. ಇದನ್ನೂ ಓದಿ:ಆಸ್ಪತ್ರೆಯಿಂದ ಇಂದು ದೀಪಿಕಾ ಪಡುಕೋಣೆ ಡಿಸ್ಚಾರ್ಜ್- ಮಗಳನ್ನು ಸ್ವಾಗತಿಸಲು ರಣ್‌ವೀರ್ ಭರ್ಜರಿ ಸಿದ್ಧತೆ
Advertisement
ಮಳೆಗಾಲದಲ್ಲಿ ಗ್ಲ್ಯಾಮರಸ್ ಆಗಿ ಕಾಣಿಸುವ ಔಟ್‌ಫಿಟ್‌ಗಳು ಬಿಡುಗಡೆಗೊಳ್ಳುವುದು ತೀರಾ ಕಡಿಮೆ. ಬಿಡುಗಡೆಗೊಂಡರೂ ಅವು ಹೈ ಫ್ಯಾಷನ್ ಅಥವಾ ಹೈ ಸ್ಟ್ರೀಟ್ ಫ್ಯಾಷನ್ ಇಲ್ಲವೇ ಸೆಲೆಬ್ರೆಟಿ ಔಟ್‌ಫಿಟ್ ಕೆಟಗರಿಗೆ ಸೇರಿಕೊಂಡಿರುತ್ತವೆ. ಹಾಗಾಗಿ ಬೆಲೆಯೂ ದುಬಾರಿಯಾಗಿರುತ್ತದೆ. ಇನ್ನು, ಮಾನ್ಸೂನ್‌ನಲ್ಲಿ ಸ್ಲಿವ್‌ಲೆಸ್ ಫ್ಯಾಷನ್ ಇಲ್ಲದಿದ್ದರೂ, ಈ ಸೀಸನ್‌ನಲ್ಲಿ ಗ್ಲ್ಯಾಮರಸ್ ಆಗಿ ಕಾಣುವ ಸಲುವಾಗಿ ಈ ವಿನ್ಯಾಸಗಳು ಬಾಡಿಕಾನ್ ಡ್ರೆಸ್‌ನೊಳಗೆ ಸೇರಿಕೊಂಡಿವೆ. ಮಾನ್ಸೂನ್‌ನಲ್ಲಿ ಈ ಔಟ್‌ಫಿಟ್‌ಗಳು ಹುಡುಗಿಯರ ಮನಸೂರೆಗೊಂಡಿವೆ. ಹಾಗಾಗಿ ಬೇಡಿಕೆ ಹೆಚ್ಚಿಸಿಕೊಂಡಿವೆ.
Advertisement
Advertisement
ಸಾದಾ ಸಿಕ್ವೀನ್ಸ್ ಡ್ರೆಸ್ ಮೇಲೆ ಕಲರ್‌ಫುಲ್ ರೈನ್ಬೋ ಚಿತ್ತಾರದಂತೆ ವಿನ್ಯಾಸಗೊಂಡಿರುವ ಈ ಔಟ್‌ಫಿಟ್, ಕಾಲೇಜು ಹುಡುಗಿಯರ ಹಾಗೂ ಯುವತಿಯರ ಫ್ಯಾಷನ್ ಚಾಯ್ಸ್‌ನಲ್ಲಿ ಸೇರಿಕೊಂಡಿವೆ. ಈ ಉಡುಪಿನಲ್ಲಿ ಅತಿಯಾದ ವಿನ್ಯಾಸದ ಹಾವಳಿ ಇರದ ಕಾರಣ, ಈ ಉಡುಗೆ, ನೋಡಲು ತೀರಾ ಸಿಂಪಲ್ ಡಿಸೈನ್ ಎಂದೆನಿಸುತ್ತದೆ. ಆದರೆ, ಲೈಟ್‌ನಲ್ಲಿ ಜಗಮಗಿಸುತ್ತದೆ.
Advertisement
ಸಿಕ್ವೀನ್ಸ್ ಡಿಸೈನ್‌ನಿಂದಾಗಿ ಪಾರ್ಟಿವೇರ್‌ನಂತೆಯೂ ಕಾಣಿಸುವುದು. ಇದರಿಂದಾಗಿ, ಬಹಳಷ್ಟು ಹುಡುಗಿಯರು ಈ ಡ್ರೆಸ್‌ಗಳನ್ನು ಪಾರ್ಟಿವೇರ್‌ಗಳಾಗಿಯೂ ಧರಿಸುತ್ತಿದ್ದಾರೆ. ಇನ್ನು, ರೆಟ್ರೊ ಶೈಲಿಯಲ್ಲಿ ಔಟ್‌ಫಿಟ್ ಕಾಣಿಸುವುದರಿಂದ ಈ ಡ್ರೆಸ್‌ಗೆ ರೆಟ್ರೊ ಸ್ಪೆಕ್ಟçಮ್ ಡ್ರೆಸ್ ಎಂದೂ ಕೂಡ ಹೇಳಲಾಗುತ್ತದೆ.
ಫ್ಯಾಷನ್ ಟಿಪ್ಸ್:
ಸ್ಪೆಕ್ಟ್ರಮ್ ಡ್ರೆಸ್ ಆಯ್ಕೆ & ಮೇಕೋವರ್‌ಗೆ ಪ್ರಾಮುಖ್ಯತೆ ಕೊಡಿ.
ಆದಷ್ಟೂ ಬಾಡಿ ಟೈಪ್‌ಗೆ ಹೊಂದುವಂತಹ ಡಿಸೈನ್‌ನ್ನು ಕೊಳ್ಳಿ.
ಡಾರ್ಕ್ ಕಲರ್‌ನಲ್ಲಿ ಬ್ಲ್ಯಾಕ್ ಶೇಡ್‌ನ ಸ್ಪೆಕ್ಟ್ರಮ್ ಡ್ರೆಸ್‌ಗಳು ಟ್ರೆಂಡ್‌ನಲ್ಲಿವೆ.
ಈ ಔಟ್‌ಫಿಟ್ ಮೇಲೆ ಕ್ರಾಪ್ ಜಾಕೆಟ್ ಧರಿಸಿ, ಮಾನ್ಸೂನ್ ಲುಕ್ ನೀಡಬಹುದು.
ಹೀಲ್ಸ್ ಫುಟ್‌ವೇರ್ ನೋಡಲು ಆಕರ್ಷಕವಾಗಿ ಕಾಣಿಸುತ್ತದೆ.
ಮಿನಿಮಲ್ ಆಕ್ಸೆಸರೀಸ್ ಕೂಡ ಆಕರ್ಷಕವಾಗಿ ಬಿಂಬಿಸುತ್ತದೆ.