-ಕುಡಿಯುವ ನೀರಿನ ಸಮರ್ಪಕ ಪೂರೈಕೆಗೆ ಪ್ರತಿ ತಾಲೂಕಿಗೆ 1 ಕೋಟಿ, ಜಿಲ್ಲೆಗೆ 5 ಕೋಟಿ
-ಜು.25ಕ್ಕೆ ಬೆಂಗಳೂರು ಕಂದಾಯ ವಿಭಾಗದ ಬರ ಪರಿಸ್ಥಿತಿಯ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು: ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ಸರ್ಕಾರ ಸಿದ್ಧವಿದೆ. ಈಗಾಗಲೇ 1 ಕೋಟಿ ರೂ.ಯನ್ನು ಪ್ರತಿಯೊಬ್ಬ ಶಾಸಕರಿಗೂ ನೀಡಲು ತೀರ್ಮಾನಿಸಿದ್ದೇವೆ. ಅಲ್ಲದೇ, ಕುಡಿಯುವ ನೀರಿನ ಸಮರ್ಪಕ ಪೂರೈಕೆಗಾಗಿ ಪ್ರತಿ ಜಿಲ್ಲೆಗೆ 5 ಕೋಟಿ ರೂ.ಯನ್ನು ನೀಡಿದ್ದೇವೆ. ಈಗಾಗಲೇ ಪಿಡಿ ಖಾತೆಗಳಲ್ಲಿ 329 ಕೋಟಿ ರೂ. ಲಭ್ಯವಿದೆ. ನಮ್ಮಲ್ಲಿ ಹಣದ ಕೊರತೆ ಇಲ್ಲ ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ್ (G Parameshwar) ಅವರು ತಿಳಿಸಿದರು.
ಸದಾಶಿವನಗರದ ಗೃಹ ಕಚೇರಿಯಲ್ಲಿ ನಾಗರಿಕರಿಂದ ಅಹವಾಲುಗಳನ್ನು ಸ್ವೀಕರಿಸಿ, ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಸೂರು (Mysuru) ಮತ್ತು ಬೆಂಗಳೂರು (Bengaluru) ವಿಭಾಗದ ಪ್ರಗತಿ ಪರಿಶೀಲನೆ ಬಾಕಿ ಇದೆ. ಬೆಂಗಳೂರು ವಿಭಾಗದಲ್ಲಿ ಜುಲೈ 25ರಂದು ನಾನು ಮತ್ತು ಮುಖ್ಯಮಂತ್ರಿಗಳು ಸಭೆ ನಡೆಸುತ್ತೇವೆ. ಅದಾಗಿ ಮೈಸೂರಿನಲ್ಲಿ ಮಾಡುತ್ತೇವೆ. ಆಗ ನಮಗೆ ರಾಜ್ಯ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಚಿತ್ರಣ ಸಿಗುತ್ತದೆ. ಆ ಬಳಿಕ ಚರ್ಚಿಸಿ, ರೈತರಿಗೆ, ಸಾಮಾನ್ಯ ಜನರಿಗೆ ಸಮಸ್ಯೆಯಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ತೀರ್ಮಾನಿಸುತ್ತೇವೆ ಎಂದರು. ಇದನ್ನೂ ಓದಿ: ಬೆಂಗ್ಳೂರು ಇತಿಹಾಸದಲ್ಲೇ ಅತಿ ಎತ್ತರದ 200 ಕೋಟಿ ವೆಚ್ಚದ ಬೃಹತ್ ಕಟ್ಟಡ ತೆರವಿಗೆ ಮುಂದಾದ ಜಿಬಿಎ
ಜನರು ಉದ್ಯೋಗಕ್ಕಾಗಿ ಗುಳೆ ಹೋಗುವುದನ್ನು ತಪ್ಪಿಸಲು ಎಲ್ಲ ಜಿಲ್ಲಾ ಪಂಚಾಯತ್ ಸಿಇಒಗಳು ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೂಡಲೇ ಜನರಿಗೆ ಉದ್ಯೋಗ ನೀಡುವಂತೆ ಸೂಚಿಸಿದ್ದೇನೆ. ನಮ್ಮಲ್ಲಿ ಹಣದ ಕೊರತೆ ಇಲ್ಲ. ಶೀಘ್ರವೇ ಕಾಮಗಾರಿಗಳನ್ನು ಆರಂಭಿಸುವಂತೆ ತಿಳಿಸಿದ್ದೇವೆ. ಕೇಂದ್ರ ಸರ್ಕಾರಕ್ಕೆ ನಾವು ಪತ್ರ ಬರೆದಿದ್ದೇವೆ. ಆದರೆ, ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗಸ್ಟ್ ತಿಂಗಳಲ್ಲಿ ಅವರು ಮನವಿಯನ್ನು ನಿರೀಕ್ಷಿಸುತ್ತಾರೆ. ಆವಾಗ ನಾವು ಮನವಿ ಸಲ್ಲಿಸಿದರೆ ಹಣವನ್ನು ಬಿಡುಗಡೆ ಮಾಡುತ್ತಾರೆ ಎಂದು ತಿಳಿಸಿದರು.
ನೀವು ಭೇಟಿ ಕೊಟ್ಟ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮುಂಗಾರಿನಲ್ಲಿ ಸ್ಪಲ್ಪ ಮಳೆಯಾದ್ದರಿಂದ ರೈತರು ಬೀಜ ಬಿತ್ತನೆ ಮಾಡಿದ್ದಾರೆ. ಆಮೇಲೆ ಮಳೆಯಾಗಿಲ್ಲ. ಈಗ ಬಿತ್ತನೆ ಮಾಡಿದ್ದೆಲ್ಲ ಒಣಗಿ ಹೋಗಿದೆ. ಈಗ ಮತ್ತೆ ಆಗಸ್ಟ್ ತಿಂಗಳಲ್ಲಿ ಮಳೆಯಾದರೆ ಬೀಜ ಬಿತ್ತನೆ ಮಾಡುತ್ತಾರೆ. ಅದೊಂದು ನಿರೀಕ್ಷೆಯಿದೆ ಎಂದು ಹೇಳಿದರು.ಇದನ್ನೂ ಓದಿ: ಹಡಗಲಿಯಲ್ಲಿ ಬೆಳ್ಳಂಬೆಳಗ್ಗೆ ಸಿಎನ್‌ಜಿ ಇಂಧನ ಸೋರಿಕೆ – ತಪ್ಪಿದ ಭಾರೀ ಅನಾಹುತ
ಅಧಿಕಾರದಲ್ಲಿರುವವರು ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು:
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ಮಾಡಲು ಅವಕಾಶ ಕೇಳಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಇದು. ಮೊದಲ ಪರೀಕ್ಷೆಯಲ್ಲಿ ಕೆಲವರು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರು. ಎರಡನೇ ಬಾರಿ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ಬಂದಿದೆ. ಲಕ್ಷಾಂತರ ಮಕ್ಕಳಿಗೆ ತೊಂದರೆಯಾಗಿದೆ. ಅಧಿಕಾರದಲ್ಲಿರುವವರು ಇದರ ಜವಾಬ್ದಾರಿ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: FIFA ವಿಶ್ವಕಪ್‌ನಿಂದ ಅರ್ಜೆಂಟೀನಾ ಬ್ಯಾನ್ ಮಾಡಿ: ಗಿನ್ನಿಸ್ ರೆಕಾರ್ಡ್‌ನತ್ತ ಸಹಿ ಸಂಗ್ರಹ ಕ್ಯಾಂಪೇನ್
ಮೋದಿಯಿಂದ ಬಹಳ ತಡವಾಗಿ ಪ್ರತಿಕ್ರಿಯೆ:
ವಿದ್ಯಾರ್ಥಿಗಳ ಪರವಾಗಿ ಇದ್ದಾರೆ ಎಂದು ಮೋದಿಯವರು ಹೇಳಿದ್ದಾರೆ. ಹಾಗಿದ್ದ ಮೇಲೆ ಧರ್ಮೇಂದ್ರ ಪ್ರಧಾನ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ. ಜವಾಬ್ದಾರಿ ಹೊತ್ತವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರ ಮೇಲೆ ದುರ್ವತನೆ ತೋರಿದ್ದಾರೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲಿಗೆ ತಲುಪುತ್ತಿದೆ? ಶಾಂತಿಯುತ ಪ್ರತಿಭಟನೆ ನಡೆಸಲು ಸಂವಿಧಾನದಲ್ಲೇ ಅವಕಾಶ ಇರುವಾಗ ಆಡಳಿತದಲ್ಲಿರುವವರು ಅವಕಾಶ ಕೊಡುವುದಿಲ್ಲ ಎಂದರೆ ಏನರ್ಥ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮತ್ತು ಬಿಜೆಪಿ ಪ್ರತಿಭಟನಾ ರ‍್ಯಾಲಿಯ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ಆಕ್ಷನ್ ಇದ್ದಾಗ ರಿಯಾಕ್ಷನ್ ಆಗೇ ಆಗುತ್ತೆ. ಅದಕ್ಕೆ ನಮ್ಮವರು ಪ್ರತಿಭಟನೆ ಮಾಡ್ತಾರೆ ಅಂತ ಅವರು ಬಂದು ಮಾಡ್ತಿದ್ದಾರೆ. ರಾಜಭವನಕ್ಕೆ ದೂರು ನೀಡಲಿ. ನಮ್ಮದೇನು ತಕರಾರಿಲ್ಲ ಎಂದರು.ಇದನ್ನೂ ಓದಿ: ಹೆಣ್ಣೆಂದು ಸ್ವಂತ ಮಗುವನ್ನೇ ಸಂಪ್‌ಗೆ ಹಾಕಿ ಹತ್ಯೆಗೈದ ಪಾಪಿ ತಂದೆ
