ಬೆಂಗಳೂರು: ವಾಲಿದ 200 ಕೋಟಿ ವೆಚ್ಚದ ಬೃಹತ್ ಕಟ್ಟಡ ತೆರವಿಗೆ (Building Demolition) ಜಿಬಿಎ (GBA) ಮುಂದಾಗಿದೆ. 18 ಅಂತಸ್ಥಿನ ಬೃಹತ್ ಕಟ್ಟಡ ಇದಾಗಿದ್ದು, ಬೆಂಗಳೂರು (Bengaluru) ಇತಿಹಾಸದಲ್ಲೇ ಅತಿ ಎತ್ತರದ ಕಟ್ಟಡ ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆದಿದೆ.
ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವ 49 ಅಪಾರ್ಟ್ಮೆಂಟ್ ಹೊಂದಿರುವ 18 ಅಂತಸ್ತಿನ ಬೃಹತ್ ಕಟ್ಟಡ ಒಂದು ಕಡೆ ವಾಲಿದ್ದು, ಜನರಿಗೆ ಭೀತಿ ಹುಟ್ಟಿಸಿದೆ. ಕಟ್ಟಡಕ್ಕೆ ಸ್ಟ್ರಕ್ಚರಲ್ ಡ್ಯಾಮೇಜ್ ಆಗಿದ್ದು, ಭವಿಷ್ಯದಲ್ಲಿ ದುರಂತ ಉಂಟಾಗುವ ಭೀತಿ ಎದುರಾಗಿದೆ. ಇದನ್ನೂ ಓದಿ: ಬಾಗಲಕೋಟೆಯಲ್ಲಿ ಗೂಳಿಗಳ ಅಟ್ಟಹಾಸ: ವೃದ್ಧನ ಮೇಲೆ ಭೀಕರ ದಾಳಿ
SNN ರಾಜ್ ಕಾರ್ಪ್ ಒಡೆತನದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ಈ ಸಂಬಂಧ ಮಾಲೀಕರ ಜೊತೆ ಜಿಬಿಎ ಮುಖ್ಯ ಆಯುಕ್ತರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಕಟ್ಟಡ ಡೆಮಾಲಿಷನ್‌ಗೆ ಸೂಚಿಸಿದ್ದಾರೆ. ಕಟ್ಟಡ ಡೆಮಾಲಿಷನ್ ಮಾಡಲು ಮಾಲೀಕರು ಒಪ್ಪಿಕೊಂಡಿದ್ದಾರೆ.
ಇಡೀ ಡೆಮಾಲಿಷನ್ ಕಾರ್ಯಾಚರಣೆಯ ಖರ್ಚನ್ನು ಭರಿಸೋದಾಗಿ ಒಪ್ಪಿಕೊಂಡಿ SNN ರಾಜ್ ಕಾರ್ಪ್ ಸಂಸ್ಥೆ ಒಪ್ಪಿಕೊಂಡಿದೆ. ಇದನ್ನೂ ಓದಿ: ಅನಂತನಾಗ್‌ನಲ್ಲಿ ಬಾಲ ಬಿಚ್ಚಿದ ಉಗ್ರರು – ಇಬ್ಬರ ಮನೆ ಧ್ವಂಸಗೊಳಿಸಿದ ಸೇನೆ
