ವಿಜಯನಗರ: ತಾಲೂಕು ಕೇಂದ್ರವಾದ ಹಡಗಲಿ(Hadagali) ಪಟ್ಟಣದಲ್ಲಿ ಬೆಳ್ಳಂಬೆಳಗ್ಗೆ ಸಿಎನ್‌ಜಿ (CNG Tanker) ಅನಿಲ ಸಾಗಿಸುತ್ತಿದ್ದ ವಾಹನವೊಂದರಲ್ಲಿ ಇಂಧನ ಸೋರಿಕೆಯಾಗಿದ್ದು, ಸಮಯಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ.
ಇಲ್ಲಿನ ಪ್ರಸಿದ್ಧ ಜಿಬಿಆರ್ (GBR) ಕಾಲೇಜಿನ ಮುಂಭಾಗವೇ ಈ ಘಟನೆ ನಡೆದಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ಸಿಎನ್‌ಜಿ ವಾಹನದಿಂದ ದಿಢೀರ್ ಇಂಧನ ಸೋರಿಕೆಯಾಗಲು ಆರಂಭಿಸಿದೆ. ಜಿಬಿಆರ್ ಕಾಲೇಜು ರಸ್ತೆಯು ನಿತ್ಯ ಜನನಿಬಿಡ ಪ್ರದೇಶವಾಗಿದ್ದು, ಅನಿಲ ಸೋರಿಕೆಯಾಗುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ಪಟ್ಟಣದ ನಿವಾಸಿಗಳು ಹಾಗೂ ಸಾರ್ವಜನಿಕರು ಆತಂಕಕ್ಕೊಳಗಾದರು.
ಅನಿಲ ಸೋರಿಕೆಯಾಗುತ್ತಿದ್ದಂತೆಯೇ ಬೆಚ್ಚಿಬಿದ್ದ ಸುತ್ತಮುತ್ತಲ ಜನರು, ವಾಹನದ ಬಳಿ ತಂಡೋಪತಂಡವಾಗಿ ಜಮಾಯಿಸಿದರು. ಬೆಳಗಿನ ಜಾವವೇ ಈ ಘಟನೆ ನಡೆದಿದ್ದರಿಂದ, ಯಾವುದೇ ಸಣ್ಣ ಕಿಡಿ ಬಿದ್ದರೂ ಭಾರಿ ಅಗ್ನಿ ದುರಂತ ಸಂಭವಿಸುವ ಭೀತಿ ಉಂಟಾಗಿತ್ತು. ಇದನ್ನೂ ಓದಿ: ಅನಂತನಾಗ್‌ನಲ್ಲಿ ಬಾಲ ಬಿಚ್ಚಿದ ಉಗ್ರರು – ಇಬ್ಬರ ಮನೆ ಧ್ವಂಸಗೊಳಿಸಿದ ಸೇನೆ
