ಟೊಕಿಯೊ: ಏಷ್ಯಾದ ಕ್ರೀಡಾ ಜಾತ್ರೆಗೆ ನಿನ್ನೆಯಿಂದ ಚಾಲನೆ ಸಿಕ್ಕಿದೆ. ʻಹೃದಯದಿಂದ ಹೃದಯಕ್ಕೆʼ ಎನ್ನುವ ಭವ್ಯ ಸಂದೇಶದೊಂದಿಗೆ ಏಷ್ಯನ್ ಗೇಮ್ಸ್ (Asian Games 2026 ) ಟೂರ್ನಿಗೆ ಚಾಲನೆ ನೀಡಲಾಗಿದ್ದು, 2ನೇ ದಿನವೇ ಭಾರತ ತನ್ನ ಪದಕ ಬೇಟೆ ಆರಂಭಿಸಿದೆ.
ಮಹಿಳೆಯರ 10 ಮೀಟರ್ ಏರ್ ರೈಫಲ್ (Air Rifle Shooting) ಗುಂಪು ಸ್ಪರ್ಧೆಯಲ್ಲಿ ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ತಂಡ ಬೆಳ್ಳಿ ಪದಕ್ಕೆ ಕೊರಳೊಡ್ಡಿದೆ. ಈ ಮೂಲಕ ಏಷ್ಯನ್ ಗೇಮ್ಸ್ನಲ್ಲಿ ಪದಕ ಖಾತೆ ತೆರೆದಿದೆ.
ಮಹಿಳೆಯರ 10 ಮೀ. ಏರ್ ರೈಫಲ್ ಗುಂಪು ಸ್ಪರ್ಧೆಯಲ್ಲಿ ಭಾರತಕ್ಕೆ ಬೆಳ್ಳಿ
ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಂ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತವು ಏಷ್ಯನ್ ಗೇಮ್ಸ್ 2026ರಲ್ಲಿ ತನ್ನ ಮೊದಲ ಪದಕ ಖಚಿತಪಡಿಸಿಕೊಂಡಿತು. ಎಲವೆನಿಲ್ ವಲರಿವನ್, ಸೋನಮ್ ಮಾಸ್ಕರ್ ಮತ್ತು ವಿದರ್ಶಾ ವಿನೋದ್ ಅವರನ್ನೊಳಗೊಂಡ ಭಾರತೀಯ ತಂಡವು 2ನೇ ಸ್ಥಾನ ಪಡೆಯುವ ಮೂಲಕ ದೇಶಕ್ಕೆ ಮೊದಲ ಪದಕ ತಂದುಕೊಟ್ಟಿತು. ಇನ್ನೂ ಅಗ್ರ ಸ್ಥಾನ ಪಡೆದ ಚೀನಾ ಚಿನ್ನದ ಪದಕ ಗೆದ್ದುಕೊಂಡರೆ, ಜಪಾನ್ 3ನೇ ಸ್ಥಾನ ಪಡೆದು ಕಂಚಿನ ಪದಕಕ್ಕೆ ಕೊರಳೊಡ್ಡಿತು.

ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಟೀಂ ಇಂಡಿಯಾ
ಕ್ರಿಕೆಟ್ನಲ್ಲಿ ಈಗಾಗಲೇ ಕ್ವಾರ್ಟರ್ನಲ್ಲಿ ಆಥಿತೇಯ ಜಪಾನ್ ಮಣಿಸಿ ಸೆಮಿಫೈನಲ್ ಪ್ರವೇಶಿಸಿರುವ ಟೀಂ ಇಂಡಿಯಾ ಮಹಿಳಾ ತಂಡ ಸೆಮಿಫೈನಲ್ನಲ್ಲಿ ಬಾಂಗ್ಲಾದೇಶ ತಂಡವನ್ನ ಎದುರಿಸಲಿದೆ. ಹಾಗೆಯೇ ಪುರುಷರ ಮತ್ತು ಮಹಿಳಾ ಹಾಕಿ ತಂಡಗಳು ತಮ್ಮ ಅಭಿಯಾನವನ್ನ ಆರಂಭಿಸುತ್ತಿವೆ.
ಸೋನಮ್ ಮಾಸ್ಕರ್ ಶುಭಾರಂಭ
ಭಾರತೀಯ ಶೂಟರ್ ಸೋನಮ್ ಮಾಸ್ಕರ್ ಅವರು ಮಹಿಳೆಯರ 10 ಮೀಟರ್ ಏರ್ ರೈಫಲ್ ಅರ್ಹತಾ ಸುತ್ತನ್ನು 634.1 ಅಂಕಗಳೊಂದಿಗೆ ಪೂರ್ಣಗೊಳಿಸಿದರು. ವೈಯಕ್ತಿಕ ವಿಭಾಗದ ಫೈನಲ್ಗೆ ಪ್ರವೇಶಿಸುವ ಸ್ಪರ್ಧೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

