– ಪೊಲೀಸರು ಬರುತ್ತಿದ್ದಂತೆ ಕಾಲ್ಕಿತ್ತ ಯುವಕರು
ವಿಜಯನಗರ: ಗಣೇಶ ವಿಸರ್ಜನಾ ಮೆರವಣಿಗೆ (Ganesha Immersion Procession) ವೇಳೆ ಎರಡು ಗುಂಪಿನ ಯುವಕರ ನಡುವೆ ಮಾರಾಮಾರಿ ನಡೆದಿರುವ ಘಟನೆ ವಿಜಯನಗರ (Vijayanagara) ಜಿಲ್ಲೆಯ ಹೊಸಪೇಟೆ (Hospet) ನಗರದ ಕೌಲ್ ಪೇಟೆಯ ದೊಡ್ಡ ಮಸೀದಿ ಬಳಿ ನಡೆದಿದೆ.
5ನೇ ದಿನದ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಘಟನೆ ನಡೆದಿದೆ. ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಯುವಕರು ಹೊಡೆದಾಡಿಕೊಂಡಿದ್ದಾರೆ. ಒಬ್ಬ ಹುಡುಗನನ್ನ ಏಳೆಂಟು ಯುವಕರ ಗುಂಪೊಂದು ಅಟ್ಟಾಡಿಸಿ ಥಳಿಸಿದೆ. ಇದನ್ನೂ ಓದಿ: ತಿರುಪತಿ ದೇವಸ್ಥಾನಕ್ಕೆ ಕಲಬೆರಕೆ ತುಪ್ಪ ಪೂರೈಕೆ ಪ್ರಕರಣ – ಇಡಿಯಿಂದ ಕಂಪನಿ ಪ್ರಮೋಟರ್ ಬಂಧನ
ಪೊಲೀಸರು ಬರುತ್ತಿದ್ದಂತೆ ಯುವಕರು ಓಡಿ ಹೋಗಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಗಲಾಟೆ ಯಾಕಾಯ್ತು?. ಹೊಡೆದಾಡಿಕೊಂಡ ಯುವಕರು ಯಾರು?. ಯಾವ ಕಾರಣಕ್ಕೆ ಹೊಡೆದಾಡಿದ್ದಾರೆ ಅನ್ನೋದು ತಿಳಿದುಬಂದಿಲ್ಲ. ವಿಡಿಯೋ ಆಧಾರದ ಮೇಲೆ ಗಲಾಟೆ ಮಾಡಿಕೊಂಡ ಯುವಕರನ್ನ ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಹರಿದು ಇಬ್ಬರು ಬಾಲಕರು ಸಾವು

