BollywoodCinemaKarnatakaLatestMain PostSandalwood

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ತೆಲುಗಿನ ಖ್ಯಾತ ನಟ ವಿಜಯ್ ದೇವರಕೊಂಡ ಇಬ್ಬರೂ ಡೇಟಿಂಗ್ ನಲ್ಲಿದ್ದರು ಎನ್ನುವುದು ಈವರೆಗೂ ಗಾಸಿಪ್ ಕಾಲಂನಲ್ಲಿ ಕೇಳಿ ಬರುತ್ತಿತ್ತು. ಇಬ್ಬರೂ ಅಧಿಕೃತವಾಗಿ ಹೇಳಿಕೊಳ್ಳದೇ ಇರುವುದರಿಂದ ಅದು ಗಾಸಿಪ್ ಎಂದೂ ನಂಬಲಾಗಿತ್ತು. ಆದರೆ, ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಬಾಲಿವುಡ್ ನಟ ಸಾರಾ ಅಲಿಖಾನ್ ಹೇಳಿದ್ದಾರೆ. ಅಲ್ಲಿಗೆ ರಶ್ಮಿಕಾ ಮತ್ತು ವಿಜಯ್ ಡೇಟಿಂಗ್ ನಲ್ಲಿ ಇದ್ದದ್ದು ಬಹಿರಂಗವಾಗಿದೆ.

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

ಕಾಫಿ ವಿತ್ ಕರಣ್ ಶೋನಲ್ಲಿ ಭಾಗಿಯಾಗಿದ್ದ ಜಾಹ್ನವಿ ಮತ್ತು ಸಾರಾ ಅಲಿಖಾನ್ ಭಾಗಿಯಾಗಿದ್ದರು. ಜಾಹ್ನವಿಗೆ ರಾಪಿಡ್ ರೌಂಡ್ ನಲ್ಲಿ ರಶ್ಮಿಕಾ ಮಂದಣ್ಣ ಅವರ ಇನ್ಸ್ಟಾ ದಲ್ಲಿ ಫಾಲೋವರ್ ಹೆಚ್ಚಾದ ಕುರಿತು ಪ್ರಶ್ನೆ ಕೇಳಲಾಗಿತ್ತು. ರಶ್ಮಿಕಾ ಮಂದಣ್ಣ ಬಗ್ಗೆ ಜಾಹ್ನವಿ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸಾರಾ, ಈ ಇಬ್ಬರ ಡೇಟಿಂಗ್ ವಿಚಾರವನ್ನು ಮಾತನಾಡಿದ್ದರು. ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳುವ ಮೂಲಕ ಗುಟ್ಟು ರಟ್ಟಾಗಿಸಿದರು. ಇದನ್ನೂ ಓದಿ:ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದವರಿಗೆ ಖಡಕ್ ವಾರ್ನಿಂಗ್ ಕೊಟ್ಟ ಫ್ಯಾಶನ್‌ ಡಿಸೈನರ್‌ ಮಸಾಬ ಗುಪ್ತಾ

ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದರು : ಸಾರಾ ಅಲಿ ಖಾನ್

ರಶ್ಮಿಕಾ ಮತ್ತು ವಿಜಯ್ ಇಬ್ಬರೂ ಆತ್ಮಿಯ ಗೆಳೆಯರು ಅನ್ನುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ತೀರಾ ಹತ್ತಿರವಾಗಿದ್ದರು ಎನ್ನುವುದಕ್ಕೆ ಅವರು ಮಾಡಿದ ಪಾರ್ಟಿಗಳೇ ಸಾಕ್ಷಿ ಇವೆ. ಅಲ್ಲದೇ, ಇಬ್ಬರೂ ಜೊತೆಯಾಗಿ ಪ್ರವಾಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾತ್ರ ದೂರವಿದ್ದಾರೆ. ಹಾಗಾಗಿ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎನ್ನುವುದು ಇದೀಗ ಪಕ್ಕಾ ಆಗಿದೆ. ಆದರೆ, ಈ ಹೊತ್ತಿನಲ್ಲಿ ಇಬ್ಬರೂ ದೂರವಾಗಿದ್ದಾರೆ ಎನ್ನುವ ಸುದ್ದಿಯೂ ಇದೆ.

Live Tv

Leave a Reply

Your email address will not be published. Required fields are marked *

Back to top button