ಫ್ಯಾಶನ್ ಡಿಸೈನರ್ ಆಗಿ ಗುರುತಿಸಿಕೊಂಡಿರುವ ಮಸಾಬ ಗುಪ್ತಾ ಬಿಟೌನ್‌ನಲ್ಲಿ ಸದ್ಯ ಸುದ್ದಿಯಲ್ಲಿದ್ದಾರೆ. ತನ್ನ ದೇಹದ ಆಕಾರ ಮತ್ತು ಲುಕ್ ಬಗ್ಗೆ ಮಾತನಾಡಿದವರಿಗೆ ಖಡಕ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ನೆಟ್ಟಿಗರೊಬ್ಬರು ನಟಿಯನ್ನ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದಾರೆ. ನೀವು ನೋಡಲು ತುಂಬಾ ಕೆಟ್ಟದಾಗಿ ಕಾಣುತ್ತೀರಿ. ನೀವು ಫ್ಯಾಶನ್ ಮತ್ತು ಮನರಂಜನಾ ಕ್ಷೇತ್ರದಲ್ಲಿರುವುದು ಒಂದು ವಿಪರ್ಯಾಸ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ನಟಿ ರಿಯಾಕ್ಟ್ ಮಾಡಿದ್ದು, ಯಾವುದೇ ಕ್ಷೇತ್ರದಲ್ಲಿರುವುದು ಅದು ಪ್ರತಿಭೆಗೆ ಸಂಬಂಧಿಸಿದ ವಿಚಾರ, ಕೆಲಸದ ಶ್ರಮ, ಶಿಸ್ತುನಲ್ಲಿ ಒಂದಾಗಿದೆ. ಇದು ನನ್ನ ಮುಖಕ್ಕೆ ಸಂಬಂಧಿಸಿದ ವಿಚಾರವಲ್ಲ. ಜತೆಗೆ ನನ್ನ ಮನಸ್ಸು ಚಾಕುವಿನಷ್ಟೇ ಹರಿತ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

