-ಇಂದು ಏರ್ ಇಂಡಿಯಾ ಸಿಬ್ಬಂದಿಯಿಂದ ಮ.1.39-1.41ರವರೆಗೆ 2 ನಿಮಿಷ ಮೌನಾಚರಣೆ
ಅಹಮದಾಬಾದ್: 260 ಜನರನ್ನು ಬಲಿಪಡೆದ ಅಹಮದಾಬಾದ್ (Ahmedabad) ಏರ್ ಇಂಡಿಯಾ ವಿಮಾನ ದುರಂತ (Air India Plane Crash) ನಡೆದು ಇಂದಿಗೆ 1 ವರ್ಷ.
ಅಂದು 2025ರ ಜೂನ್ 12 (ಗುರುವಾರ). ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (Sardar Vallabhbhai Patel International Airport) ಲಂಡನ್‌ನ (London) ಗ್ಯಾಟ್ವಿಕ್‌ಗೆ ತೆರಳಲು ಂI171 ಏರ್ ಇಂಡಿಯಾ ಟೇಕ್ ಆಫ್ ಆಗಿತ್ತು. ಮಧ್ಯಾಹ್ನ 1:38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ಆದರೆ ದುರಾದೃಷ್ಟವೆಂದರೆ ಟೇಕ್ ಆಫ್ ಕೆಲವೇ ಸೆಕೆಂಡುಗಳಲ್ಲಿಯೇ ಮೆಡಿಕಲ್ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿಸಿ, ವಿಮಾನ ಅಪಘಾತಕ್ಕೀಡಾಯಿತು. ಇದನ್ನೂ ಓದಿ: Air India Crash | 215 ಡಿಎನ್‌ಎ ಮ್ಯಾಚ್ – 198 ಮೃತದೇಹ ಹಸ್ತಾಂತರ

ದುರಂತದಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ 241 ಮಂದಿ ಹಾಗೂ ಇತರ 19 ಜನರು ಸಾವನ್ನಪ್ಪಿದ್ದರು. ಘಟನೆ ನಡೆದು ವರ್ಷವಾದರೂ ಅಪಘಾತಕ್ಕೆ ನಿಖರ ಕಾರಣ ಏನು ಎಂಬುದರ ತನಿಖಾ ವರದಿ ಇನ್ನೂ ಸಿದ್ಧಗೊಂಡಿಲ್ಲ. ಮಡಿದವರ ಕುಟುಂಬಗಳ ಪೈಕಿ ಶೇ.96ರಷ್ಟು ಕುಟುಂಬಗಳಿಗೆ ಇದುವರೆಗೆ ಮಧ್ಯಂತರ ಪರಿಹಾರವಾಗಿ ತಲಾ 25 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ.
ಈ ನಡುವೆ ವಿಮಾನ ಅಪಘಾತದಲ್ಲಿ ಮಡಿದವರಿಗೆ ಗೌರವ ಸಲ್ಲಿಸುವ ಸಲುವಾಗಿ ಏರ್ ಇಂಡಿಯಾ ಸಿಬ್ಬಂದಿ ಶುಕ್ರವಾರ ತಮ್ಮ ಕಾರ್ಯಸ್ಥಳಗಳಲ್ಲಿ ಮಧ್ಯಾಹ್ನ 1.39ರಿಂದ 1.41ರವರೆಗೆ ಎರಡು ನಿಮಿಷಗಳ ಮೌನಾಚರಣೆ ನಡೆಸಲಿದ್ದಾರೆ.ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

