ಬೆಂಗಳೂರು: ಜಿಬಿಎ ಚುನಾವಣೆ (GBA Election) ಮುಂದೂಡುವಿಕೆಯಲ್ಲಿ ರಾಜ್ಯ ಸರ್ಕಾರದ ಷಡ್ಯಂತ್ರ ಮತ್ತು ಕುತಂತ್ರ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ (Congress) ಅಧಿಕಾರಕ್ಕೆ ಬಂದಾಗಿನಿಂದ ಇದೇ ಮುಖ್ಯಮಂತ್ರಿಗಳು (D.K Shivakumar) ಬೆಂಗಳೂರಿನ (Bengaluru) ಉಸ್ತುವಾರಿ ಸಚಿವರಾಗಿದ್ದರು. ಈ ಸರಕಾರದ ಯೋಗ್ಯತೆಗೆ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ. ಗುಂಡಿ ಮುಚ್ಚಲೂ ಸಾಧ್ಯ ಆಗಿಲ್ಲ. ಇಂಥ ವಾತಾವರಣದಲ್ಲಿ ಜಿಬಿಎ ಚುನಾವಣೆ ನಡೆಸಿದರೆ ಐದೂ ಕಡೆ ಬಿಜೆಪಿ ಅಧಿಕಾರಕ್ಕೆ ಬರುವ ಭಯದಿಂದ ಸುಪ್ರೀಂ ಕೋರ್ಟಿನಲ್ಲಿ ಚುನಾವಣಾ ಆಯೋಗದ ಮೂಲಕ ಅರ್ಜಿ ಸಲ್ಲಿಸಿ ಕಪಟ ನಾಟಕವನ್ನು ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ ಎಂದು ಆಕ್ಷೇಪಿಸಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ಬಸ್‌ನಲ್ಲೇ ಪ್ರಯಾಣಿಸಿದ ಸಚಿವ ಯತೀಂದ್ರ ಸಿದ್ದರಾಮಯ್ಯ
ಸುಪ್ರೀಂ ಕೋರ್ಟ್ ಕೂಡ ಡಿಸೆಂಬರ್‌ವರೆಗೆ ಕಾಲಾವಕಾಶ ಕೊಟ್ಟಿದೆ. ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರ ಮತ್ತು ಕುತಂತ್ರ ಇರುವಂಥದ್ದು. ಕಾಂಗ್ರೆಸ್ಸಿನವರಿಗೆ ಚುನಾವಣೆ ನಡೆಸುವ ಮತ್ತು ಬೆಂಗಳೂರು ಅಭಿವೃದ್ಧಿ ಮಾಡುವ ಇಚ್ಛಾಶಕ್ತಿ ಇಲ್ಲ ಎಂದರು. ಇದನ್ನೂ ಓದಿ: ರೈತ ವಿರೋಧಿ ತುಘಲಕ್ ದರ್ಬಾರ್ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಬಿಎಸ್‌ವೈ ಆಕ್ರೋಶ
