ತೆಲುಗಿನ ಖ್ಯಾತ ನಟ ರಾಣಾ ದುಗ್ಗುಬಾಟಿ (Rana Daggubati)ನಾಳೆ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನಾಳೆ ಸಂಜೆ 4.30ಕ್ಕೆ ಬೆಂಗಳೂರಿನ ಮಾಲ್ ವೊಂದರಲ್ಲಿ ಉಪೇಂದ್ರ (Upendra) ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ಕಬ್ಜ’ (Kabzaa) ಸಿನಿಮಾದ ಟೀಸರ್ (Teaser) ಬಿಡುಗಡೆ ಆಗುತ್ತಿದ್ದು, ಈ ಸಮಾರಂಭಕ್ಕೆ ರಾಣಾ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಇವರೊಂದಿಗೆ ಶ್ರೀಯಾ ಶರಣ್ (Shriya Sharan) ಕೂಡ ಕಾರ್ಯಕ್ರಮಕ್ಕೆ ಸಾಥ್ ನೀಡುತ್ತಿದ್ದಾರೆ.
Advertisement
ಐದು ಭಾಷೆಗಳಲ್ಲಿ ಕಬ್ಜ ಸಿನಿಮಾದ ಟೀಸರ್ ಬಿಡುಗಡೆ ಆಗುತ್ತಿದ್ದು, ಉಪೇಂದ್ರ ಅವರ ಹುಟ್ಟು ಹಬ್ಬಕ್ಕಾಗಿ ಈ ಉಡುಗೊರೆಯನ್ನು ನೀಡುತ್ತಿದ್ದಾರೆ ನಿರ್ದೇಶಕ ಆರ್.ಚಂದ್ರು. ಈವರೆಗೂ ಫಸ್ಟ್ ಲುಕ್, ಪೋಸ್ಟರ್ ಮಾತ್ರ ರಿಲೀಸ್ ಆಗಿದ್ದು ,ಇದೇ ಮೊದಲ ಬಾರಿಗೆ ಕಬ್ಜ ಸಿನಿಮಾದ ಟೀಸರ್ ಅಭಿಮಾನಿಗಳಿಗೆ ನೋಡಲು ಸಿಗುತ್ತಿದೆ. ಹಾಗಾಗಿ ಸಹಜವಾಗಿಯೇ ಉಪ್ಪಿ ಮತ್ತು ಸುದೀಪ್ ಅಭಿಮಾನಿಗಳಿಗೆ ಕಾಯುವಂತಾಗಿದೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್
Advertisement
Advertisement
ಕನ್ನಡದ ಸಿನಿಮಾವೊಂದು ಭಾರತೀಯ ಸಿನಿಮಾ ರಂಗದಲ್ಲಿ ಮತ್ತೆ ಸದ್ದು ಮಾಡುತ್ತಿದ್ದು, ಈಗಾಗಲೇ ಕಬ್ಜ ಸಿನಿಮಾ ಪ್ಯಾನ್ ಇಂಡಿಯಾ ಲೇವಲ್ ನಲ್ಲಿ ಹವಾ ಕ್ರಿಯೇಟ್ ಮಾಡಿದೆ. ನಿರ್ದೇಶಕ ಚಂದ್ರು, (R. Chandru) ಕಿಚ್ಚ ಸುದೀಪ್ (Sudeep) ಮತ್ತು ಉಪೇಂದ್ರ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದು, ಕೆಜಿಎಫ್ 2 ಸಿನಿಮಾದಲ್ಲಿದ್ದ ತಾಂತ್ರಿಕ ತಂಡ ಕೂಡ ಈ ಚಿತ್ರಕ್ಕಾಗಿ ಕೆಲಸ ಮಾಡಿದೆ. ಹಾಗಾಗಿ ಕೆಜಿಎಫ್ 2 ಸಿನಿಮಾಗೆ ಕಬ್ಜವನ್ನು ಹೋಲಿಕೆ ಮಾಡಲಾಗುತ್ತಿದೆ.
Advertisement
ಉಪ್ಪಿ ಹುಟ್ಟು ಹಬ್ಬವನ್ನು ಮತ್ತಷ್ಟು ರಂಗಾಗಿಸಲು ಕಬ್ಜ ನಿರ್ದೇಶಕ ಆರ್.ಚಂದ್ರು ಸಜ್ಜಾಗಿದ್ದು, ಉಪ್ಪಿ ಅಭಿಮಾನಿಗಳಿಗೆ ಭರ್ಜರಿ ಬಹುಮಾನವನ್ನೇ ಕೊಡಲಿದ್ದಾರಂತೆ. ‘ಕೆಜಿಎಫ್ 2’ ಚಿತ್ರಕ್ಕೆ ಸಂಗೀತ ನೀಡಿದ್ದ ರವಿ ಬಸ್ರೂರ್ ಅವರೇ ಈ ಸಿನಿಮಾಗೂ ಸಂಗೀತ ನೀಡುತ್ತಿದ್ದು, ಟೀಸರ್ ಹೇಗೆ ಇರಲಿದೆ ಎನ್ನುವ ಕುತೂಹಲವಂತೂ ಮೂಡಿದೆ. ಚಂದ್ರು ಅವರು ಸೆರೆ ಹಿಡಿದಿರುವ ವಿಷ್ಯುವೆಲ್ಸ್, ರವಿ ಬಸ್ರೂರ್ ಮ್ಯೂಸಿಕ್ ಅಭಿಮಾನಿಗಳನ್ನು ಮೋಡಿ ಮಾಡುವದಂತೂ ಕಂಡಿತ.