ಅಯೋಧ್ಯೆ: ಇಲ್ಲಿನ (Ayodhya) ರಾಮ ಮಂದಿರದಲ್ಲಿ ದೇಣಿಗೆ (Ram Mandir Donation) ಲೂಟಿ ಮಾಡಿದವರ ಮೇಲೆ `ಬುಲ್ಡೋಜರ್’ ಅಸ್ತ್ರ ಪ್ರಯೋಗಕ್ಕೆ ಉತ್ತರ ಪ್ರದೇಶ ಸರ್ಕಾರ ಮುಂದಾಗಿದೆ. ಮಂದಿರದ ಹಣ ಲೂಟಿ ಮಾಡಿ ಶಹದತ್‌ಗಂಜ್‌ನ ಲವ್‌ಕುಶ್ ಮಿಶ್ರಾ ಹಾಗೂ ಕೌಶಲ್‌ಪುರಿಯಲ್ಲಿರುವ ಅನುಕಲ್ಪ್ ಮಿಶ್ರಾ ಮನೆ ಧ್ವಂಸಕ್ಕೆ ಅಯೋಧ್ಯಾ ಡೆವಲಪ್‌ಮೆಂಟ್ ಅಥಾರಿಟಿ ನೊಟೀಸ್ ಕೊಟ್ಟಿದೆ.
ಲವ್‌ಕುಶ್ ಮಿಶ್ರಾ 1000 ಚದರ ಅಡಿ ವಿಸ್ತೀರ್ಣದಲ್ಲಿ ಬೃಹತ್ ಮನೆ ನಿರ್ಮಿಸ್ತಿದ್ದಾನೆ. ಇದಕ್ಕಾಗಿ 25 ಲಕ್ಷ ರೂ. ಹಣ ಕೊಟ್ಟು ಭೂಮಿ ಖರೀದಿಸಿದ್ದಾನೆ. 80-90 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಮಾಡ್ತಿದ್ದಾನೆ. ಈ ಮನೆಯು ಮುಂದಿನ 4 ತಿಂಗಳ ಒಳಗೆ ಪೂರ್ಣಗೊಳ್ಳಬೇಕಿತ್ತು. ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನದಲ್ಲಿ ಟಿನ್ನು ಯಾದವ್ ಕಿಂಗ್‌ಪಿನ್: ಚಂಪತ್ ರಾಯ್ ಬಹಿರಂಗ
ಬೇನಾಮಿ ಹೆಸರಿನಲ್ಲಿ ಆಸ್ತಿಪಾಸ್ತಿ ಮಾಡಿರುವ ಶಂಕೆಯಲ್ಲಿ ಟ್ರಸ್ಟ್‌ನ ಎಲ್ಲಾ ಸದಸ್ಯರು, ಬಂಧಿತ ಆರೋಪಿಗಳ ಆಸ್ತಿ, ನೋಂದಣಿ ದಾಖಲೆಗಳನ್ನು ಪರಿಶೀಲಿಸಲು ಎಸ್‌ಐಟಿ ಮುಂದಾಗಿದೆ. ಆರೋಪಿಗಳ ಆಸ್ತಿ ಅಯೋಧ್ಯಾ, ಲಖ್ನೋ, ನೋಯ್ಡಾ ಹಾಗೂ ಇತರೆ ರಾಜ್ಯಗಳಲ್ಲಿ ಇದೆಯೇ ಎಂದು ಶೋಧಿಸುತ್ತಿದ್ದಾರೆ.
ಈ ಮಧ್ಯೆ, ಅಯೋಧ್ಯೆಯ ಶ್ರೀರಾಮ ಮಂದಿರದ ದೇಣಿಗೆ ಹಗರಣದಲ್ಲಿ ಚಂಪತ್‌ರಾಯ್, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಮೇಲೆ ಎಫ್‌ಐಆರ್ ದಾಖಲಿಸುವಂತೆ ಫೈಜಾಬಾದ್ ಬಾರ್ ಅಸೋಸಿಯೇಷನ್ ಪೊಲೀಸರಿಗೆ ದೂರು ಕೊಟ್ಟಿದೆ. ಇನ್ನೊಂದೆಡೆ, ಚಂಪತ್ ರಾಯ್‌ನಂಥ ತಿಮಿಂಗಿಲವನ್ನು ಬಿಟ್ಟು ನನ್ನ ಅಣ್ಣನನ್ನು ಬಲಿಪಶು ಮಾಡಲಾಗ್ತಿದೆ ಅಂತ ಟಿನ್ನು ಯಾದವ್ ಸಹೋದರ ದಿನೇಶ್ ಯಾದವ್ ಕಿಡಿಕಾರಿದ್ದಾನೆ. ಇದನ್ನೂ ಓದಿ:Ram Temple Donation Theft| ಆರೋಪಿ ಮನೆಯಲ್ಲಿ ನಕಲಿ ‘ರಾಮರಾಜ್ಯ ಕೋಶ’ ಪೆಟ್ಟಿಗೆ, ಕ್ಯೂಆರ್ ಕೋಡ್ ಪತ್ತೆ!
