ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರನೌತ್ (Kangan) ಅವರು Gen-Z ಪ್ರತಿಭಟನಾಕಾರರ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗಳಿಗೆ ನಟ ಸೋನು ಸೂದ್ (Sonu Sood) ಪ್ರತಿಕ್ರಿಯೆ ನೀಡಿದ್ದು, ಯುವಜನತೆಯಿಂದಲೇ ನಾವು ಸ್ಟಾರ್ ಆಗಿರೋದು, ಅವರನ್ನು ಗೌರವಿಸಬೇಕು ಎಂದು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಮೊದಲಿಗೆ ಕಂಗನಾ ಹೇಳಿಕೆಯನ್ನು ಕೇಳಿಲ್ಲ ಎಂದು ಹೇಳಿದರು. ಬಳಿಕ, ಯುವಜನರ ಬಗ್ಗೆ ಮಾತನಾಡುತ್ತಾ, ಈ ಯುವಕರೇ ನಟರನ್ನು ಸ್ಟಾರ್ ಮಾಡುತ್ತಾರೆ. ಈ ಸ್ಥಾನಕ್ಕೆ ತಲುಪಲು ಅವರೇ ಕಾರಣ. ಅವರು ನಮ್ಮ ಜೊತೆ ಇರುವವರೆಗೂ ನಾವು ಬೆಳೆಯುತ್ತೇವೆ. ಅವರು ದೂರವಾದರೆ ಅದು ಕಷ್ಟವಾಗುತ್ತದೆ. ಆದ್ದರಿಂದ ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗಬೇಕು. ‘ನೀವು ನಟರಾಗಿರಲಿ, ವೈದ್ಯರಾಗಿರಲಿ ಅಥವಾ ಬೇರೆ ಯಾವುದೇ ವೃತ್ತಿಯಲ್ಲಿರಲಿ, ಜನರು ನಿಮ್ಮನ್ನು ಬೆಂಬಲಿಸುವವರೆಗೂ ಮಾತ್ರ ನಿಮ್ಮ ಅಸ್ತಿತ್ವಕ್ಕೆ ಅರ್ಥ ಇರುತ್ತದೆ ಎಂದು ಅಭಿಪ್ರಾಯಪಟ್ಟರು.
ಕಂಗನಾ ಪ್ರತಿಭಟನಾಕಾರರನ್ನು ‘ಜನರೇಷನ್ ಗಟರ್’ ಎಂದು ಕರೆದಿರುವ ಬಗ್ಗೆ ಪ್ರಶ್ನಿಸಿದಾಗ, ಅವರು ಹಾಗೆ ಹೇಳಿದ್ದರೆ, ಅದು ಸರಿಯಲ್ಲ. ಅಂತಹ ಮಾತು ಹೇಳಬಾರದಿತ್ತು ಸಾರ್ವಜನಿಕರೇ ದೇವರ ಮತ್ತೊಂದು ರೂಪ. ಅವರ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಇರಬೇಕು ಎಂದು ಸೋನು ಸೂದ್ ಹೇಳಿದರು.
ಇತ್ತೀಚೆಗೆ ಕಂಗನಾ ರನೌತ್ ಇನ್‌ಸ್ಟಾಗ್ರಾಮ್‌ನಲ್ಲಿ Gen-Z ಪ್ರತಿಭಟನಾಕಾರರನ್ನು ಟೀಕಿಸಿ ಪೋಸ್ಟ್ ಮಾಡಿದ್ದರು. ಪ್ರತಿಭಟನೆಯಲ್ಲಿ ಬಳಸಿದ ಭಾಷೆ ಮತ್ತು ವರ್ತನೆಯನ್ನು ʼವಾಂತಿ ಬರಿಸುವಂತಿದೆʼ ಎಂದು ಹೇಳಿದ್ದರು. ಇದನ್ನೂ ಓದಿ: ದರ್ಶನ್ ಭೇಟಿ ಬಳಿಕ ವಿಜಯಲಕ್ಷ್ಮಿ ಹಾಕಿದ್ದ ಪೋಸ್ಟನ್ನೇ ಕಾಪಿ ಮಾಡಿದ ಧನ್ವೀರ್; ಅರ್ಥ ಏನ್ ಗೊತ್ತಾ?
ಪ್ರತಿಭಟನಾಕಾರರು ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದ ಕಂಗನಾ, ಅವರನ್ನು ʼಜನರೇಷನ್ ಗಟರ್ʼ ಎಂದು ಉಲ್ಲೇಖಿಸಿದ್ದರು. ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪರ-ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.ಇದನ್ನೂ ಓದಿ: ಬ್ರಾಹ್ಮಿ ಮುಹೂರ್ತದಲ್ಲಿ ಬಿಡುಗಡೆಯಾಗಲಿದೆ ‘ರಾಮಾಯಣ’ ಟ್ರೈಲರ್
