ಬಹಳ ದಿನಗಳ ಬಳಿಕ ನಟ ಧನ್ವೀರ್(Dhanveer) ಮತ್ತೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ (Darshan) ಅವರನ್ನು ಭೇಟಿ ಮಾಡಿದ್ದಾರೆ. ಈ ಹಿಂದೆ ಆಗಾಗ ದರ್ಶನ್ ಅವರನ್ನು ಭೇಟಿ ಮಾಡುತ್ತಿದ್ದ ಧನ್ವೀರ್, ಕಳೆದ ಮೂರು ತಿಂಗಳಿಂದ ಅವರ ಭೇಟಿಯಿಂದ ದೂರ ಉಳಿದಿದ್ದರು. ಆದರೆ ಮಂಗಳವಾರ ಸ್ನೇಹಿತರ ಜೊತೆ ಜೈಲಿಗೆ ತೆರಳಿ ದರ್ಶನ್ ಅವರನ್ನು ಭೇಟಿ ಮಾಡಿ ಕೆಲ ಸಮಯ ಮಾತುಕತೆ ನಡೆಸಿದ್ದಾರೆ.
ದರ್ಶನ್ ಭೇಟಿಯ ಬಳಿಕ ಧನ್ವೀರ್ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಮತ್ತೊಂದು ಪೋಸ್ಟ್ ಕೂಡ ಹಾಕಿದ್ದು, ಇದೀಗ ಅದೇ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
‘ಪಡೆದುಕೊಂಡ ಮೇಲೆ… ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬ ಅರ್ಥದ ಮೋಟಿವೇಷನಲ್ ಪೋಸ್ಟ್ ಅನ್ನು ಧನ್ವೀರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಆದರೆ ಕುತೂಹಲ ಹೆಚ್ಚಾಗಿದ್ದು ಇಲ್ಲೇ. ಕಳೆದೊಂದು ತಿಂಗಳ ಹಿಂದೆ ದರ್ಶನ್ ಮತ್ತು ಧನ್ವೀರ್ ನಡುವಿನ ಸ್ನೇಹದಲ್ಲಿ ಬಿರುಕು ಮೂಡಿದೆ ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಅದೇ ಸಮಯದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಇದೇ ರೀತಿಯ ‘ಪಡೆದುಕೊಂಡ ಮೇಲೆ… ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ… ಅದು ವಸ್ತುವಾಗಲಿ, ವ್ಯಕ್ತಿಯಾಗಲಿ’ ಎಂಬ ಪೋಸ್ಟ್ ಹಂಚಿಕೊಂಡಿದ್ದರು.
ಆ ಪೋಸ್ಟ್‌ನಲ್ಲಿ ವಿಜಯಲಕ್ಷ್ಮಿ ಯಾರ ಹೆಸರನ್ನೂ ನೇರವಾಗಿ ಉಲ್ಲೇಖಿಸಿರಲಿಲ್ಲ. ಆದರೆ ಯಾರನ್ನು ಉದ್ದೇಶಿಸಿ ಈ ಪೋಸ್ಟ್ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆ ವೇಳೆ ಧನ್ವೀರ್ ಹೆಸರೂ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿತ್ತು.
ಇದೀಗ ಪರಿಸ್ಥಿತಿ ಬದಲಾಗಿದೆ. ದರ್ಶನ್ ಮತ್ತು ಧನ್ವೀರ್ ಮತ್ತೆ ಭೇಟಿಯಾಗಿದ್ದಾರೆ. ಜೊತೆಗೆ ದರ್ಶನ್ ಜೊತೆಗಿನ ಫೋಟೋವನ್ನೂ ಧನ್ವೀರ್ ಹಂಚಿಕೊಂಡಿದ್ದಾರೆ. ಇದರಿಂದ ಇಬ್ಬರ ನಡುವಿನ ಮನಸ್ತಾಪ ದೂರವಾಗಿದೆಯೇ ಎಂಬ ಚರ್ಚೆ ಕೂಡ ಶುರುವಾಗಿದೆ. ಇದರ ನಡುವೆ ಧನ್ವೀರ್ ಹಂಚಿಕೊಂಡಿರುವ ಮೋಟಿವೇಷನಲ್ ಪೋಸ್ಟ್ ಮತ್ತೆ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ಜನನಾಯಗನ್ ಚಿತ್ರದಲ್ಲಿ ಕನ್ನಡಿಗನ ಹವಾ – ವಜ್ರಾಂಗ್ ವೈರಲ್
ವಿಜಯಲಕ್ಷ್ಮಿ ಈ ಹಿಂದೆ ಹಂಚಿಕೊಂಡಿದ್ದ ಅದೇ ಮಾತುಗಳನ್ನು ಧನ್ವೀರ್ ಕೂಡ ಪೋಸ್ಟ್ ಮಾಡಿರುವುದರ ಅರ್ಥವೇನು? ಇದು ಕೇವಲ ಮೋಟಿವೇಷನಲ್ ಪೋಸ್ಟ್‌ನೋ, ಅಥವಾ ಯಾರಿಗಾದರೂ ಪರೋಕ್ಷ ಸಂದೇಶವೋ ಎಂಬ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ.
ಧನ್ವೀರ್ ಈ ಪೋಸ್ಟ್‌ನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಹೀಗಾಗಿ ಈ ಪೋಸ್ಟ್ ಯಾರನ್ನು ಉದ್ದೇಶಿಸಿ ಹಾಕಲಾಗಿದೆ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಆದರೆ ವಿಜಯಲಕ್ಷ್ಮಿ ಅವರ ಹಳೆಯ ಪೋಸ್ಟ್ ಮತ್ತು ಧನ್ವೀರ್ ಅವರ ಈಗಿನ ಪೋಸ್ಟ್ ನಡುವಿನ ಸಾಮ್ಯ ಮಾತ್ರ ಅಭಿಮಾನಿಗಳ ಗಮನ ಸೆಳೆದಿದೆ.ಇದನ್ನೂ ಓದಿ: ಭುವನ್‌ಗೆ ನಾಯಕಿಯಾದ ನಟಿ ಊರ್ವಶಿ ಮಗಳು ತೇಜ: ಶೀರ್ಷಿಕೆ ಅನಾವರಣ
