ನವದೆಹಲಿ: ಲಂಡನ್ನಿಂದ (London) ದೆಹಲಿಗೆ (Delhi) ಹೊರಟಿದ್ದ ಇಂಡಿಗೋ (Indigo) ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪರಿಣಾಮ ವಿಮಾನ ಲಂಡನ್ಗೆ ವಾಪಸ್ ಆಗಿದೆ.
ಲಂಡನ್ನ ಹೀಥ್ರೂನಿಂದ ವಿಮಾನ ನಿಲ್ದಾಣದಿಂದ ಮಧ್ಯರಾತ್ರಿ 12:40ಕ್ಕೆ (ಭಾರತೀಯ ಕಾಲಮಾನ) ಬೋಯಿಂಗ್ 787-9 ವಿಮಾನ (ಫ್ಲೈಟ್ 6E04) ಟೇಕ್ಆಫ್ ಆಗಿತ್ತು. ಆಗಸದಲ್ಲಿ ಸುಮಾರು ಒಂದು ಗಂಟೆ ಹಾರಾಟ ನಡೆಸಿದ ಬಳಿಕ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕೂಡಲೇ ವಿಮಾನ ಲಂಡನ್ಗೆ ವಾಪಸ್ ಆಗಿದ್ದು, ಸುಮಾರು 2 ಗಂಟೆಗೆ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲೇ ಕೈ ಶಾಸಕರ ಮಧ್ಯೆ ಜಟಾಪಟಿ – ನಾರಾಯಣಸ್ವಾಮಿ ವಿರುದ್ಧ ರೂಪಾ ಶಶಿಧರ್ ಆಕ್ರೋಶ
ಈ ಕುರಿತು ಇಂಡಿಗೋ ವಕ್ತಾರರು ಮಾಹಿತಿ ನೀಡಿದ್ದು, ಸೆಪ್ಟೆಂಬರ್ 22ರಂದು ಲಂಡನ್ನಿಂದ ನವದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ 6E04ರಲ್ಲಿ ಟೇಕ್ಆಫ್ ಆದ ಕೆಲವೇ ಹೊತ್ತಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ವಿಮಾನವನ್ನು ಸದ್ಯ ತಪಾಸಣೆಗೆ ಒಳಪಡಿಸಲಾಗಿದ್ದು, ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಪಡೆದ ನಂತರ ತನ್ನ ಕಾರ್ಯಾಚರಣೆಯನ್ನು ಪುನರಾರಂಭಿಸಲಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಇಂಡಿಗೋ ವಿಷಾದಿಸುತ್ತೇವೆ ವ್ಯಕ್ತಪಡಿಸಿದ್ದು, ಅಗತ್ಯ ಸೌಲಭ್ಯ ಒದಗಿಸುವುದಾಗಿ ತಿಳಿಸಿದೆ.ಇದನ್ನೂ ಓದಿ: ಪಿಒಕೆಯನ್ನು ಸ್ಮಶಾನ ಮಾಡಿದ್ದಾರೆ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಕಾಶ್ಮೀರಿ ಮಹಿಳೆ ಗುಡುಗು

