ಹಾವೇರಿ: ಸಾರಿಗೆ ಬಸ್ (Bus) ಮತ್ತು ಲಾರಿ (Lorry) ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಪ್ರಯಾಣಿಕ ಸಾವನ್ನಪ್ಪಿದ್ದು, 6 ಜನರಿಗೆ ಗಂಭೀರವಾದ ಘಟನೆ ಹಾವೇರಿ (Haveri) ತಾಲೂಕಿನ ಹಳೇರತ್ತಿ ಗ್ರಾಮದ ಬಳಿ ನಡೆದಿದೆ.
ಚನ್ನೂರು ಗ್ರಾಮದ ನಿವಾಸಿ ಎಸ್.ಎಸ್.ಮಠದ್ ಮೃತ ದುರ್ದೈವಿ. ಸಾರಿಗೆ ಬಸ್ನಲ್ಲಿ 30ಕ್ಕೂ ಅಧಿಕ ಪ್ರಯಾಣಿಕರು ಪ್ರಯಾಣ ಮಾಡುತ್ತಿದ್ದರು. ಆರು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತೆಗೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಬಿಜೆಪಿ ಸಂಘಟನಾ ಪುನಾರಚನೆ; ಕರ್ನಾಟಕ ಉಸ್ತುವಾರಿ ಬದಲು
ಸಾರಿಗೆ ಬಸ್ ಹಾವೇರಿಯಿಂದ ನೆಗಳೂರು ಗ್ರಾಮಕ್ಕೆ ಹೊರಟ್ಟಿತ್ತು ಎನ್ನಲಾಗಿದೆ. ಕ್ಯಾಬೇಜ್ ತುಂಬಿಕೊAಡು ಹೋಗಲು ಬಂದಿದ್ದ ಲಾರಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಗುತ್ತಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಮುಖ್ಯ ಚುನಾವಣಾಧಿಕಾರಿ ನೇಮಕಾತಿ ಸಮಿತಿಯಿಂದ ಸಿಜೆಐ ಹೊರಕ್ಕೆ – ಸುಪ್ರೀಂನಿಂದ ಭಿನ್ನ ತೀರ್ಪು

