ನವದೆಹಲಿ: ಭಾರತೀಯ ಜನತಾ ಪಕ್ಷದಲ್ಲಿ (BJP) ಮಹತ್ವದ ಸಂಘಟನಾ ಪುನಾರಚನೆ ನಡೆದಿದ್ದು, ದೇಶದ 28 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಗೆ ನೂತನ ಉಸ್ತುವಾರಿಗಳು ಮತ್ತು ಸಹ-ಉಸ್ತುವಾರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನೇಮಕ ಮಾಡಿದ್ದಾರೆ.
ಕರ್ನಾಟಕದ ನೂತನ ರಾಜ್ಯ ಉಸ್ತುವಾರಿಯಾಗಿ ಹರೀಶ್ ದ್ವಿವೇದಿ (Harish Dwivedi) ಅವರನ್ನು ನೇಮಕ ಮಾಡಲಾಗಿದೆ. ಸಹ-ಉಸ್ತುವಾರಿಯಾಗಿ ಡಾ. ಕಸಮ್ ವೆಂಕಟೇಶ್ವರಲು ಅವರಿಗೆ ಜವಾಬ್ದಾರಿ ನೀಡಲಾಗಿದೆ. ಹರೀಶ್ ದ್ವಿವೇದಿ ಅವರಿಗೆ ಕರ್ನಾಟಕದ ಜತೆಗೆ ಬಿಹಾರದ ಉಸ್ತುವಾರಿಯನ್ನೂ ವಹಿಸಲಾಗಿದೆ. ಇದನ್ನೂ ಓದಿ: ನೀವು ಮಾಡಿರೋದು ದೇಶದ್ರೋಹ; ಟೈಂ ಬರುತ್ತೆ, ನಿಮ್ಮನ್ನ ಹಿಡಿಯುತ್ತೇವೆ – ರಾಹುಲ್ ಗಾಂಧಿ ಎಚ್ಚರಿಕೆ
ಕರ್ನಾಟಕ ಮೂಲದ ಇಬ್ಬರು ಬಿಜೆಪಿ ನಾಯಕರಿಗೆ ಇತರ ರಾಜ್ಯಗಳ ಸಂಘಟನಾ ಜವಾಬ್ದಾರಿ ನೀಡಲಾಗಿದೆ. ಪ್ರೊ. ಎಂ.ನಾಗರಾಜ್ ಅವರಿಗೆ ಕೇರಳದ ರಾಜ್ಯ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರಿಗೆ ತೆಲಂಗಾಣದ ಸಹ-ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ.
ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಹರಿಯಾಣ ಮತ್ತು ಛತ್ತೀಸ್‌ಗಢದ ಉಸ್ತುವಾರಿ ನೀಡಲಾಗಿದೆ. ರಾಮ್ ಮಾಧವ್ ಅವರಿಗೆ ತಮಿಳುನಾಡು ಮತ್ತು ಉತ್ತರಾಖಂಡ, ಸತೀಶ್ ಪೂನಿಯಾ ಅವರಿಗೆ ಜಮ್ಮು-ಕಾಶ್ಮೀರ ಮತ್ತು ಪಂಜಾಬ್, ಸುನಿಲ್ ಬನ್ಸಲ್ ಅವರಿಗೆ ತೆಲಂಗಾಣ ಮತ್ತು ಪಶ್ಚಿಮ ಬಂಗಾಳದ ಜವಾಬ್ದಾರಿ ನೀಡಲಾಗಿದೆ. ಉತ್ತರ ಪ್ರದೇಶದ ಉಸ್ತುವಾರಿಯಾಗಿ ವಿನೋದ್ ತಾವಡೆ ಮುಂದುವರಿದಿದ್ದಾರೆ. ಮಹಾರಾಷ್ಟ್ರದ ಉಸ್ತುವಾರಿಯಾಗಿ ಬೈಜಯಂತ್ ಜಯ್ ಪಾಂಡಾ ಅವರನ್ನು ನೇಮಿಸಲಾಗಿದೆ. ಇದನ್ನೂ ಓದಿ: ಕೇಂದ್ರದಿಂದ 50,000 ರೂ. ಬರ ಪರಿಹಾರ ಕೊಡಬೇಕು – ಎಂಎಲ್‌ಸಿ ಶಿವಕುಮಾರ್ ಆಗ್ರಹ

