ರಾಕಿಂಗ್ ಸ್ಟಾರ್ ಯಶ್ (Yash) ಮತ್ತು ಬಾಲಿವುಡ್ ನಟ ರಣಬೀರ್ ಕಪೂರ್(Ranbir Kapoor) ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಟ್ರೈಲರ್ ಬಿಡುಗಡೆಗೆ ನಿರ್ಮಾಪಕ ನಮಿತ್ ಮಲ್ಹೋತ್ರ ವಿಶೇಷ ಮುಹೂರ್ತ ಆಯ್ಕೆ ಮಾಡಿಕೊಂಡಿದ್ದಾರೆ.
ಜುಲೈ 30ರಂದು ಬೆಳಗ್ಗೆ 4:15ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ಟ್ರೈಲರ್ ಬಿಡುಗಡೆಯಾಗಲಿದೆ. ಮೊದಲು ಜುಲೈ 24ರಂದು ಟ್ರೈಲರ್ ಬಿಡುಗಡೆ ಮಾಡಲು ಯೋಜಿಸಲಾಗಿತ್ತು. ಆದರೆ, ನೀಟ್ ಹೋರಾಟ ಹಾಗೂ ಇತರ ಬೆಳವಣಿಗೆಗಳ ಕಾರಣದಿಂದ ಅಂದು ಬಿಡುಗಡೆ ಮುಂದೂಡಲಾಗಿತ್ತು. ಇದೀಗ ಹೊಸ ದಿನಾಂಕ ನಿಗದಿಪಡಿಸಿ ಟ್ರೈಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧವಾಗಿದೆ. ಇದರ ಜೊತೆಗೆ ನಿರ್ಮಾಪಕರು ಮತ್ತೊಂದು ವಿಶೇಷ ಪ್ಲ್ಯಾನ್ ಕೂಡ ಮಾಡಿದ್ದಾರೆ.ಇದನ್ನೂ ಓದಿ: ದರ್ಶನ್ ಭೇಟಿ ಬಳಿಕ ವಿಜಯಲಕ್ಷ್ಮಿ ಹಾಕಿದ್ದ ಪೋಸ್ಟನ್ನೇ ಕಾಪಿ ಮಾಡಿದ ಧನ್ವೀರ್; ಅರ್ಥ ಏನ್ ಗೊತ್ತಾ?
ನಾಳೆ ವಿಶ್ವದಾದ್ಯಂತ ‘ಸ್ಪೈಡರ್ ಮ್ಯಾನ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರದರ್ಶನಕ್ಕೂ ಮುನ್ನ ‘ರಾಮಾಯಣ’ ಸಿನಿಮಾದ ಟ್ರೈಲರ್ ಪ್ರದರ್ಶಿಸಲಾಗುತ್ತದೆ. ಸ್ಪೈಡರ್ ಮ್ಯಾನ್ ಚಿತ್ರವನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಆಗಮಿಸುವ ಹಿನ್ನೆಲೆ, ಹೆಚ್ಚಿನ ಜನರಿಗೆ ಟ್ರೈಲರ್ ತಲುಪುವ ಉದ್ದೇಶದಿಂದ ಚಿತ್ರತಂಡ ಈ ತಂತ್ರ ಅನುಸರಿಸಿದೆ.ಇದನ್ನೂ ಓದಿ: ʼನೀವು ನಿಷ್ಪ್ರಯೋಜಕರುʼ – ಸಿಜೆಪಿ ವಕ್ತಾರ ಸೌರವ್ ದಾಸ್ ಟೀಕೆಗೆ ಕಂಗನಾ ಕಿಡಿ\
