ಲಕ್ನೋ: ಅಯೋಧ್ಯೆ ರಾಮ ಮಂದಿರದಲ್ಲಿ (Ram Mandir) ನಡೆದ ಕಳ್ಳತನ ಪ್ರಕರಣಗಳ ಕುರಿತು ಎಸ್‌ಐಟಿ ನಡೆಸಿದ ತನಿಖೆಯು ಹಲವಾರು ಸಂಗತಿಗಳನ್ನ ಬಹಿರಂಗಪಡಿಸಿದೆ. 42 ದಿನಗಳಲ್ಲಿ 70 ಬಾರಿ ಕಳ್ಳತನಗಳು ನಡೆದಿರುವ ಬಗ್ಗೆ ಎಸ್‌ಐಟಿಗೆ ಬಲವಾದ ಸಾಕ್ಷ್ಯ ಸಿಕ್ಕಿದೆ.
ಈ ಮಧ್ಯೆ ರಾಮಮಂದಿರದಲ್ಲಿ ದೇಣಿಗೆ/ಕಾಣಿಕೆ (Ram Mandir Donation) ಲೆಕ್ಕ ಹೇಗೆ ಮಾಡ್ತಾರೆ? ಅನ್ನೋದನ್ನ ತಿಳಿಯುವುದೂ ಮುಖ್ಯವಾಗಿದೆ. ಇದನ್ನೂ ಓದಿ: ರಾಮನ ಲೆಕ್ಕ ‘ರಹಸ್ಯ’ ಬಯಲಾಗಿದ್ದು ಹೇಗೆ..? – ಕಳೆದ 20 ದಿನಗಳಲ್ಲಿ ಏನೇನಾಯ್ತು..?

ದಿನಕ್ಕೆ 2 ಬಾರಿ ರಾಮನ ದೇಣಿಗೆ ಲೆಕ್ಕ
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ದಿನಕ್ಕೆ 2 ಬಾರಿ ದೇಣಿಗೆ ಲೆಕ್ಕ ನಡೆಯುತ್ತದೆ. 2 ಶಿಫ್ಟ್‌ಗಳಲ್ಲಿ 40 ಸಿಬ್ಬಂದಿಯನ್ನ ಬಳಸಿಕೊಂಡು ದೇಣಿಗೆ ಲೆಕ್ಕ ಮಾಡಲಾಗುತ್ತದೆ.
ಮೊದಲ ಶಿಫ್ಟ್ ಬೆಳಗ್ಗೆ ಮಂದಿರ ಓಪನ್ ಆದ ಸಮಯದಿಂದ ಮಧ್ಯಾಹ್ನ 1 ಗಂಟೆವರೆಗೆ ಇರಲಿದ್ದು, ಮಧ್ಯಾಹ್ನ 2 ಗಂಟೆಗೆ ಲೆಕ್ಕ ಶುರು ಮಾಡಲಾಗುತ್ತದೆ. ಇದನ್ನೂ ಓದಿ: ರಾಮಮಂದಿರ ದೇಣಿಗೆ; 42 ದಿನಗಳಲ್ಲಿ 70 ಬಾರಿ ಕಳ್ಳತನ – ತನಿಖೆ ವೇಳೆ ಎಸ್‌ಐಟಿ ಸಿಕ್ತು ಸಾಕ್ಷ್ಯ
2ನೇ ಶಿಫ್ಟ್ ಮಧ್ಯಾಹ್ನ 1 ಗಂಟೆಯಿಂದ, ಸಂಜೆ ಮಂಗಳಾರತಿ ಮುಗಿಯುವವರೆಗೆ ಇರಲಿದ್ದು, ರಾತ್ರಿ 8 ಗಂಟೆಗೆ ಲೆಕ್ಕ ಶುರು ಮಾಡಲಾಗುತ್ತದೆ. ಒಂದು ಶಿಫ್ಟ್‌ನಲ್ಲಿ ತಲಾ 20 ಸಿಬ್ಬಂದಿಯಂತೆ 2 ಶಿಫ್ಟ್‌ಗಳಲ್ಲಿ 40 ಸಿಬ್ಬಂದಿಯನ್ನ ಬಳಸಿಕೊಂಡು ದೇಣಿಗೆ ಲೆಕ್ಕ ಮಾಡಲಾಗುತ್ತದೆ. ಇವರನ್ನ ಹೊರತುಪಡಿಸಿ ಟ್ರಸ್ಟ್‌ನ ವಿಶ್ವಾಸಾರ್ಹ ವ್ಯಕ್ತಿಗಳು ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ ಎಂದು ಟ್ರಸ್ಟ್‌ನ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಿಸಿಟಿವಿ ಕ್ಯಾಮೆರಾವಿದ್ದರೂ ಕಳ್ಳತನ – ಅಯೋಧ್ಯೆ ರಾಮಮಂದಿರದ ದೇಣಿಗೆ ಹಣ ರಹಸ್ಯ ಕ್ಯಾಮೆರಾದಲ್ಲಿ ಬಯಲಾಗಿದ್ದೇಗೆ?
