– 2014 ರಿಂದ ನೇಮಕಾತಿ ಅಕ್ರಮಗಳ ತನಿಖೆ

ರಾಂಚಿ: ಕಳೆದ 24 ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿದ್ದ ತೀವ್ರ ಪ್ರತಿಭಟನೆಗೆ ಕೊನೆಗೂ ಜಾರ್ಖಂಡ್ ಸರ್ಕಾರ(Jharkhand Govt) ಮಣಿದಿದೆ. ಜಾರ್ಖಂಡ್ ಸಿಬ್ಬಂದಿ ಆಯ್ಕೆ ಆಯೋಗದ ಪದವಿ ಮಟ್ಟದ (JSSC-CGL) ಪರೀಕ್ಷೆಯನ್ನು ಹಾಗೂ ಟಿಡಿಪಿಎಲ್ (TDPL) ಸಂಸ್ಥೆಯ ಮೂಲಕ ನಡೆಸಲಾದ ಎಲ್ಲಾ ನೇಮಕಾತಿಗಳನ್ನು ರದ್ದುಗೊಳಿಸಿರುವುದಾಗಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಘೋಷಿಸಿದ್ದಾರೆ.
ಟಿಡಿಪಿಎಲ್ ಏಜೆನ್ಸಿ ಮೂಲಕ ನಡೆಸಲಾದ ಎಲ್ಲಾ ಪರೀಕ್ಷೆಗಳು, ಪ್ರಕಟಿಸಲಾದ ಫಲಿತಾಂಶಗಳು ಹಾಗೂ ನೇಮಕಾತಿ ಪ್ರಕ್ರಿಯೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ.
#WATCH | Ranchi, Jharkhand: One of the protestors says, “We were appointed following a High Court division bench ruling. We had the Supreme Court’s seal of approval, yet suddenly, the government. In an instant, we became unemployed. We are upset with the Chief Minister. Sir,… https://t.co/lrF8XFP9lr pic.twitter.com/INwJO6AOBS
— ANI (@ANI) August 17, 2026
2014 ರಿಂದ ಟಿಡಿಪಿಎಲ್ ಸಂಸ್ಥೆ ನಡೆಸಿರುವ ಪ್ರತಿಯೊಂದು ಪರೀಕ್ಷೆಯ ಅಕ್ರಮಗಳ ಕುರಿತು ಸಿಐಡಿ (CID) ತನಿಖೆ ನಡೆಸಲಿದೆ. ಪರೀಕ್ಷಾ ಅಕ್ರಮಗಳು ಮತ್ತು ಲೋಪದೋಷಗಳ ಕುರಿತು ಪ್ರತ್ಯೇಕ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗುವುದು ಎಂದು ಹೇಳಿದ್ದಾರೆ.
ಸಿಐಡಿ ಹಾಗೂ ಎಸ್‌ಐಟಿ (SIT) ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಹಲವು ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದ್ದು, ಪರೀಕ್ಷಾ ಅಕ್ರಮ ಮತ್ತು ವಂಚನೆಯಲ್ಲಿ ಭಾಗಿಯಾಗಿ ನೇಮಕಗೊಂಡಿದ್ದವರನ್ನು ಈಗಾಗಲೇ ಬಂಧಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.
#WATCH | Ranchi: Protest by JPSC-JSSC aspirants | Jharkhand CM Hemant Soren says, “The investigations being conducted by both the SIT and the CID have brought to light several shocking facts. Since the investigation is ongoing, it is not possible to disclose every detail openly;… pic.twitter.com/eLn0xJlsgE
— ANI (@ANI) August 17, 2026
ಪರೀಕ್ಷೆಗಳನ್ನು ಪಾರದರ್ಶಕವಾಗಿ ನಡೆಸಲು ಈಗಾಗಲೇ ನಿರ್ದಿಷ್ಟ ಮಾರ್ಗಸೂಚಿ (SOP) ಜಾರಿಯಲ್ಲಿದ್ದರೂ, ಅದನ್ನು ಸಂಬಂಧಪಟ್ಟವರು ಸರಿಯಾಗಿ ಪಾಲಿಸದ ಕಾರಣ ಇತ್ತೀಚಿನ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದಿವೆ ಎಂದು ಮುಖ್ಯಮಂತ್ರಿ ಒಪ್ಪಿಕೊಂಡಿದ್ದಾರೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪೇಪರ್ ಸೋರಿಕೆ ತಡೆಗೆ ಈಗಾಗಲೇ ಕಠಿಣ ಕಾನೂನು ಜಾರಿಗೆ ತರಲಾಗಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕವಾಗಿ ಸುಧಾರಿಸಲು ಸರ್ಕಾರ ಬದ್ಧವಾಗಿದೆ ಎಂದು ಸೊರೇನ್ ಭರವಸೆ ನೀಡಿದ್ದಾರೆ.
