ನವದೆಹಲಿ: ಬಿಜೆಪಿಯನ್ನು ತೊರೆದ ಕೆಲ ತಿಂಗಳುಗಳ ಬಳಿಕ, ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ(Annamalai) ಅವರು ಪಕ್ಷದಿಂದ ಹೊರಬರಲು ಕಾರಣವಾದ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.
ವಾಹಿನಿಯೊಂದರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಯ ದೆಹಲಿ-ಕೇಂದ್ರಿತ ತೀರ್ಮಾನ ತೆಗೆದುಕೊಳ್ಳುವ ಕಾರ್ಯವೈಖರಿಯೊಂದಿಗೆ ತಮಗೆ ತೀವ್ರ ಭಿನ್ನಾಭಿಪ್ರಾಯಗಳಿದ್ದವು ಎಂದು ಸ್ಪಷ್ಟಪಡಿಸಿದ್ದಾರೆ.
At the #IndiaTodayTamilRoundTable, K Annamalai criticised what he described as a “Delhi-centric” approach to decision-making and called for greater empowerment of state-level leaders.
He also questioned what he termed a “Gujarat-centric” model of development, arguing that major… pic.twitter.com/iIP7WLLQQS
— IndiaToday (@IndiaToday) August 17, 2026
ರಾಜ್ಯದ ನಿರ್ಧಾರಗಳನ್ನು ದೆಹಲಿಯಲ್ಲಿ ಕೂತು ತೆಗೆದುಕೊಳ್ಳುವ ಸಂಸ್ಕೃತಿ ಸರಿಯಲ್ಲ. ತಮಿಳುನಾಡಿನ ನೆಲದಲ್ಲೇ ಸ್ಥಳೀಯ ನಾಯಕತ್ವಕ್ಕೆ ಆದ್ಯತೆ ನೀಡುವ ರಾಜಕೀಯ ಶಕ್ತಿಯ ಅಗತ್ಯವಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರ ನಿವಾಸದಲ್ಲಿ ತಮಿಳುನಾಡು ಬಿಜೆಪಿಯ(Tamil Nadu) ಕೋರ್ ಕಮಿಟಿ ಸಭೆ ನಡೆದಿದ್ದು ತಮಗೆ ತೀವ್ರ ಬೇಸರ ತಂದಿತ್ತು. ರಾಜ್ಯದ ಯಾವುದೇ ಪಕ್ಷದ ಕೋರ್ ಕಮಿಟಿ ಸಭೆಯು ಅದೇ ರಾಜ್ಯದ ನೆಲದಲ್ಲೇ ನಡೆಯಬೇಕು ಎಂದಿದ್ದಾರೆ.
ರಾಜ್ಯ ಮಟ್ಟದ ನಾಯಕರಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪೂರ್ಣ ಅಧಿಕಾರ ನೀಡಬೇಕು, ಆದರೆ ರಾಷ್ಟ್ರೀಯ ನಾಯಕತ್ವ ತಮಿಳುನಾಡಿನ ಯುವ ಮತದಾರರ ಆಶೋತ್ತರಗಳನ್ನು ಗ್ರಹಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
#IndiaTodayTamilRoundTable | What drove K. Annamalai to leave the BJP?
Founder & Chief Mentor @annamalai_k responds at the India Today Tamil Nadu Roundtable.#TamilNadu #Politics @Akshita_N pic.twitter.com/RsZ2ZVbsw0
— IndiaToday (@IndiaToday) August 17, 2026
ಕೇಂದ್ರದ ಪ್ರಮುಖ ಯೋಜನೆಗಳು, ಎಐ ಕಂಪನಿಗಳು ಹಾಗೂ ಅಂತಾರಾಷ್ಟ್ರೀಯ ಕ್ರೀಡಾಕೂಟಗಳು ಕೇವಲ ಗುಜರಾತ್‌ಗೆ ಮಾತ್ರ ಸೀಮಿತವಾಗುತ್ತಿವೆ. ಇಡೀ ದೇಶದ ಸಮಗ್ರ ಅಭಿವೃದ್ಧಿ ಗುಜರಾತ್-ಕೇಂದ್ರಿತವಾಗಿರಬಾರದು ಎಂದು ವಾದಿಸಿದರು.
ಮೇಕೆದಾಟು ಬಗ್ಗೆ ಹೇಳಿದ್ದೇನು?
2021ರಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಅಣೆಕಟ್ಟು ನಿರ್ಮಿಸುವ ಅಧಿಕಾರವಿಲ್ಲ, ಕೇಂದ್ರದ ಬಳಿಯೇ ಬರಬೇಕು ಎಂದು ಹೇಳಿತ್ತು. ಆದರೆ 2026ರಲ್ಲಿ ಅದೇ ಸರ್ಕಾರ ಸಂಸತ್ತಿನಲ್ಲಿ ಕರ್ನಾಟಕವು ಅಣೆಕಟ್ಟು ನಿರ್ಮಿಸಬಹುದು ಮತ್ತು ಕೇಂದ್ರದ ಅನುಮತಿಯ ಅಗತ್ಯವಿಲ್ಲ ಎಂದು ಹೇಳಿದೆ. ಐದು ವರ್ಷಗಳಲ್ಲಿ ಈ ಬದಲಾವಣೆ ಏಕೆ? ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. 2028ರಲ್ಲಿ ಮೊದಲು ಕರ್ನಾಟಕದ ಚುನಾವಣೆ ಬರುತ್ತದೆ, ನಂತರ ತಮಿಳುನಾಡಿನ ಚುನಾವಣೆ ಬರಲಿದೆ. ಕೇವಲ ಚುನಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರಗಳು ಇಂತಹ ದ್ವಂದ್ವ ನಿಲುವುಗಳನ್ನು ತಳೆಯಬಾರದು ಎಂದು ಹೇಳಿದರು.
ಬಿಜೆಪಿಯಿಂದ ಹೊರಬಂದ ನಂತರ ಅಣ್ಣಾಮಲೈ ಅವರು ವಿ ದ ಲೀಡರ್ಸ್ (We the Leaders) ಎಂಬ ತಳಮಟ್ಟದ ಜನಪರ ಚಳವಳಿಯನ್ನು ಹುಟ್ಟುಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಗೆ ಯಾವುದೇ ವೈಯಕ್ತಿಕ ವಿರೋಧವಿಲ್ಲ ಮತ್ತು ತಮ್ಮ ನೂತನ ಸಂಘಟನೆಯು ರಾಷ್ಟ್ರೀಯತೆಯ ಆಶಯಗಳನ್ನೇ ಮುಂಚೂಣಿಯಲ್ಲಿಟ್ಟುಕೊಂಡು ರಾಜ್ಯದ ನೆಲಮಟ್ಟದಲ್ಲಿ ಕೆಲಸ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

