ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಮ್ಮ ಮಾಸ್ ಇಮೇಜ್‌ನಿಂದ ಹೊರಬಂದು ಹೊಸ ರೀತಿಯ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಧ್ರುವ ಸರ್ಜಾ ಅಭಿನಯದ ಹೊಸ ಚಿತ್ರಕ್ಕೆ ‘ಕೆಮಿಸ್ಟ್ರಿ’ (Chemistry) ಎಂಬ ಶೀರ್ಷಿಕೆ ಇಡಲಾಗಿದ್ದು, ನಟಿ ನಭಾ ನಟೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಿರ್ಮಾಣ ಸಂಸ್ಥೆ ಪೀಪಲ್ ಮೀಡಿಯಾ ಫ್ಯಾಕ್ಟರಿ (PMF) ಬ್ಯಾನರ್‌ನಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಕೃತಿ ಪ್ರಸಾದ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಯುವ ನಿರ್ದೇಶಕ ವಿಶಾಲ್ ಆತ್ರೇಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಇದುವರೆಗೂ ಮಾಸ್ ಆ್ಯಕ್ಷನ್ ಹಾಗೂ ಭರ್ಜರಿ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ಧ್ರುವ ಸರ್ಜಾ, ಈ ಬಾರಿ ಪ್ರೇಮಕಥೆ ಮತ್ತು ಕೌಟುಂಬಿಕ ಕಥೆಯೊಂದಿಗೆ ಬರುತ್ತಿದ್ದಾರೆ. ಚಿತ್ರದಲ್ಲಿ ಧ್ರುವ ಸರ್ಜಾ ಅವರ ರೊಮ್ಯಾನ್ಸ್, ಭಾವನಾತ್ಮಕ ಅಭಿನಯವನ್ನು ನೋಡಲು ಅಭಿಮಾನಿಗಳಲ್ಲಿ ಈಗಾಗಲೇ ಕುತೂಹಲ ಮೂಡಿದೆ.
ಕೌಟುಂಬಿಕ ಬಾಂಧವ್ಯ ಮತ್ತು ಲವ್‌ಸ್ಟೋರಿಗೆ ಚಿತ್ರದಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕುಟುಂಬದವರು ಒಟ್ಟಿಗೆ ಕುಳಿತು ನೋಡಬಹುದಾದ ಮನರಂಜನೆಯ ಸಿನಿಮಾ ನೀಡುವುದು ಚಿತ್ರತಂಡದ ಉದ್ದೇಶವಾಗಿದೆ.
ಧ್ರುವ ಸರ್ಜಾ ಮತ್ತು ಯುವ ನಿರ್ದೇಶಕ ವಿಶಾಲ್ ಆತ್ರೇಯ ಅವರ ಕಾಂಬಿನೇಷನ್ ಈ ಸಿನಿಮಾದ ಮತ್ತೊಂದು ವಿಶೇಷತೆಯಾಗಿದೆ. ಮಾಸ್ ಹೀರೋ ಧ್ರುವ ಸರ್ಜಾ ಯುವ ನಿರ್ದೇಶಕರ ವಿಭಿನ್ನ ಆಲೋಚನೆಗೆ ಕೈಜೋಡಿಸಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.ಇದನ್ನೂ ಓದಿ: ವಸುದೈವ ಕುಟುಂಬಕಂ: ಪೊಗರು ನಂತರ ಮತ್ತೆ ಒಂದಾದ ಜೋಡಿ
ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಈಗಾಗಲೇ ಕಿಚ್ಚ ಸುದೀಪ್, ಗಣೇಶ್ ಹಾಗೂ ಉಪೇಂದ್ರ ಸೇರಿದಂತೆ ಕನ್ನಡದ ಹಲವು ಸ್ಟಾರ್ ನಟರೊಂದಿಗೆ ಸಿನಿಮಾಗಳನ್ನು ನಿರ್ಮಿಸಿದೆ. ಇದೀಗ ಧ್ರುವ ಸರ್ಜಾ ಅವರೊಂದಿಗೆ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಕೈಗೆತ್ತಿಕೊಂಡಿದೆ.ಇದನ್ನೂ ಓದಿ: ಟೊರಾಂಟೋ ಚಿತ್ರೋತ್ಸವಕ್ಕೆ ಕನ್ನಡದ ಮಹಿಮಾ

