ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಮೇಜ್ ಬಿಲ್ಡ್‌ಗೆ ಪ್ರೈವೇಟ್ ಏಜೆನ್ಸಿ ಮಾಡಿಕೊಂಡಿರುವ ರೀತಿಯಲ್ಲೇ, ಈಗ ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಒಂದು ಟೀಂ ರೆಡಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಹೌದು, ಡಿಕೆಶಿ ಹೋಗುತ್ತಿದ್ದರೆ ಹಿಂದೆ ಮುಂದೆ ಐದಾರು ಜನ ಓಡಾಡುತ್ತಿರುತ್ತಾರೆ. ಬೇರೆ ಬೇರೆ ಆ್ಯಂಗಲ್‍ಗಳಲ್ಲಿ ಫೋಟೋ ತೆಗೆಯುವುದು, ವೀಡಿಯೋ ಮಾಡುವುದು ಕಾಮನ್ ಆಗ್ಬಿಟ್ಟಿದೆ. ಇನ್ನು ಸೋಶಿಯಲ್ ಮೀಡಿಯದಲ್ಲಂತೂ ಬೊಂಬಾಟ್ ಆಗಿ ಫೋಟೋಗಳನ್ನು ಹಾಕೋದು, ಕ್ಯಾಂಪೇನ್ ಮಾಡೋದು ಆಗಾಗ ನಡೀತಾ ಇರುತ್ತದೆ. ಇದಕ್ಕೆಂದೇ ಡಿಕೆಶಿ ಖಾಸಗಿ ಏಜೆನ್ಸಿ ಒಂದಕ್ಕೆ ಇಮೇಜ್ ಬಿಲ್ಡ್ ಕಾಂಟ್ರ್ಯಾಕ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕರ ಸಮಸ್ಯೆ ಆಲಿಸದ ಸಿಎಂ
Advertisement
Advertisement
ಇದೀಗ ಸಿದ್ದರಾಮಯ್ಯಗೂ ಕೂಡ ಆ ರೀತಿ ಒಂದು ಟೀಂ ಬೇಕು ಅನ್ನಿಸಿರಬೇಕು. ಈ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡಲು ಪ್ರೊಫೆಶನಲ್ ಟೀಂ ಸಿದ್ಧ ಮಾಡಿದ್ದು, ಇನ್ಮುಂದೆ ಸಿದ್ದರಾಮಯ್ಯಗೂ ಕೂಡ ಆ ಒಂದು ಲೋಕಲ್ ಟೀಂ ಸೋಶಿಯಲ್ ಮೀಡಿಯಾ ಕ್ಯಾಂಪೇನ್ ಮಾಡುತ್ತಂತೆ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಪುತ್ರ ಯತೀಂದ್ರ ನೇತೃತ್ವದಲ್ಲಿ ಸೋಶಿಯಲ್ ಮೀಡಿಯಾ ಟೀಂ ಕೆಲಸ ಮಾಡುತ್ತಿತ್ತು. ಇದನ್ನೂ ಓದಿ: ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್