CrimeDakshina KannadaDistrictsKarnatakaLatestLeading NewsMain Post

ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವೀಣ್ ಕುಟುಂಬಸ್ಥರು ಪೊಲಿಸ್ ಇಲಾಖೆಗೆ ಧನ್ಯವಾದ ಅರ್ಪಿಸಿದ್ದಾರೆ.

ಹತ್ಯೆ ಪ್ರಮುಖ ಮೂವರು ಆರೋಪಿಗಳನ್ನು ಬಂಧಿಸಿದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದಾರೆ. ಆರೋಪಿಗಳಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು. ಯಾವ ವಕೀಲನೂ ಆರೋಪಿಗಳಿಗೆ ವಕಾಲತು ನಡೆಸಬಾರದು ಎಂದು ನೆಟ್ಟಾರು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ. ಇದೆ ವೇಳೆ ಪೊಲಿಸ್ ಇಲಾಖೆಗೆ ಧನ್ಯವಾದ ಕೂಡ ತಿಳಿಸಿದ್ದಾರೆ. ಇದನ್ನೂ ಓದಿ: ವಾರದ ಹಿಂದೆಯೇ ಪ್ರವೀಣ್‌ ಹತ್ಯೆಗೆ ಸ್ಕೆಚ್‌ – ಕೇರಳದ 7 ಕಡೆ ಆಶ್ರಯ, ಹಂತಕರು ಕೊನೆಗೂ ಅಂದರ್‌

ಪ್ರಕರಣದ ಕುರಿತು ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಡಿಜಿಪಿ ಅಲೋಕ್ ಕುಮಾರ್, ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಇಂದು ಬಂಧಿಸಲಾಗಿದೆ. ಮಂಗಳೂರಿನ ತಲಪಾಡಿ ಚೆಕ್ ಪೋಸ್ಟ್ ಬಳಿ ಬಂದಿಸಲಾಗಿದೆ. ಸುಳ್ಯದ ಶಿಯಾಬ್ (33), ರಿಯಾಝ್ (27) ಅಂಕತಡ್ಕ ಮತ್ತು ಸುಳ್ಯದ ಎಲಿಮಲೆ ನಿವಾಸಿ ಬಶೀರ್ ಬಂಧಿತ ಆರೋಪಿಗಳು. ರಿಯಾಝ್ ಕೊಳಿ ಸಪ್ಲೈ ಮಾಡುವ ವ್ಯಾಪಾರ, ಬಶೀರ್ ಹೋಟೆಲ್‍ನಲ್ಲಿ ಕೆಲಸ ಮಾಡುತ್ತಿದ್ದ, ಕೃತ್ಯಕ್ಕೆ ಬ್ಲ್ಯಾಕ್ ಸ್ಪ್ಲೆಂಡರ್ ಬೈಕ್ ಬಳಕೆ ಮಾಡಲಾಗಿದೆ. ಕಾರೊಂದನ್ನು ಸಹ ಬಳಕೆ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ ಸೊತ್ತುಗಳನ್ನು ಸಹ ವಶಪಡಿಸಿಕೊಳ್ಳುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ಕಾಸರಗೋಡು ಮಸೀದಿಗೆ ಹೋಗಿದ್ದ ಹಂತಕರು – SDPI, PFI ಲಿಂಕ್‌, ವಾರಂಟ್ ಜಾರಿ ಮಾಡಿ ಆಸ್ತಿ ಸೀಜ್‌

ಸಿಯಾಬ್ ಕೋಕೊ ಪೂರೈಕೆದಾರನಾಗಿ ಕೆಲಸ ಮಾಡುತ್ತಿದ್ದ. ವಾರೆಂಟ್ ಇಶ್ಯೂ ಮಾಡಿ ಆಸ್ತಿ ಮುಟ್ಟುಗೋಲು ಹಾಕುತ್ತೇವೆ. ಯಾವುದೇ ಅಮಾಯಕರ ಬಂಧನ ಮಾಡಲ್ಲ. ಆದರೆ ಕೃತ್ಯದಲ್ಲಿ ಭಾಗಿಯಾದವರೆಲ್ಲರನ್ನು ಬಂಧಿಸುತ್ತೇವೆ. ಯಾರನ್ನು ಫಿಕ್ಸ್ ಮಾಡೋದಕ್ಕೆ ಹೋಗಲ್ಲ. ಯಾರನ್ನೋ ಬಂಧಿಸೋದಕ್ಕೆ ಇದು ಹುಡುಗಾಟವಲ್ಲ. ನಮಗೆ ಜಾತಿ, ಧರ್ಮ, ಬಣ್ಣ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಧ್ವಜಾರೋಹಣ

Live Tv

Leave a Reply

Your email address will not be published. Required fields are marked *

Back to top button