- 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ಕಲಬುರಗಿ: ಭಾರೀ ಮಳೆಗೆ (Rain) ಚಿಂಚೋಳಿ (Chincholi) ತಾಲೂಕಿನ ಚಿಮ್ಮನಚೋಡ ಗ್ರಾಮದ ಬಳಿ ಕಿರು ಸೇತುವೆ ಕುಸಿದಿದೆ.
ಚಿಮ್ಮನಚೋಡ – ನರನಾಳ ಗ್ರಾಮದ ನಡುವೆ ಈ ಸೇತುವೆ ಇದೆ. ಸೇತುವೆ ಕುಸಿದ ಪರಿಣಾಮ ಚಿಂಚೋಳಿಯಿಂದ ಭಾಲ್ಕಿಗೆ ( Bhalki) ವಾಹನ ಸಂಚಾರ ಸ್ಥಗಿತಗೊಂಡಿದೆ.

ಚಿಂಚೋಳಿಯ ಬೆಡಕಪಳ್ಳಿ ಗ್ರಾಮದ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ಜನ ಪರದಾಡುತ್ತಿದ್ದಾರೆ. ಸರ್ಕಾರ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಜನ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಮುಂಗಾರು ಎಂಟ್ರಿ: ರಾಜ್ಯಾದ್ಯಂತ ವರುಣನ ಅಬ್ಬರ, ಧರೆಗುರುಳಿದ ಮರ ಜನಜೀವನ ಅಸ್ತವ್ಯಸ್ತ!
ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ವ್ಯಾಪಕ ಮಳೆಯಾಗುವ ಸಾದ್ಯತೆ ಇದೆ. ಉಳಿದ ಕಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದನ್ನೂ ಓದಿ: ಹಾವೇರಿಯಲ್ಲಿ ಮಳೆರಾಯನ ಅಬ್ಬರ – ಪೊಲೀಸ್ ಠಾಣೆ, ಮನೆಗಳಿಗೆ ನುಗ್ಗಿದ ನೀರು
