ಆನೇಕಲ್: ವನ್ಯಜೀವಿಗಳನ್ನ ಬೇಟೆಯಾಡಲು ಸಂಚು ರೂಪಿಸಿದ್ದ 7 ಮಂದಿ ಕಳ್ಳಬೇಟೆಗಾರರನ್ನ (Poachers) ವಲಯ ಅರಣ್ಯಾಧಿಕಾರಿಗಳ ತಂಡ ಬಂಧಿಸಿರುವ ಘಟನೆ ಆನೇಕಲ್‌ನಲ್ಲಿ (Anekal) ನಡೆದಿದೆ.
ಸ್ಕಾರ್ಪಿಯೋ ಕಾರಿನಲ್ಲಿ ಬೇಟೆಯಾಡಲು ಬಂದಿದ್ದ 7 ಮಂದಿಯನ್ನ ತಟ್ಟೆಕೆರೆ ಅರಣ್ಯ (Forest) ಪ್ರದೇಶ ವ್ಯಾಪ್ತಿಯಲ್ಲಿ ಬಂಧಿಸಿದ್ದಾರೆ. ಇದನ್ನೂ ಓದಿ: ಭಾರೀ ಮಳೆಗೆ ಸೇತುವೆ ಕುಸಿತ | ಚಿಂಚೋಳಿ – ಭಾಲ್ಕಿ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತ
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಆನೇಕಲ್ ವಲಯ ಅರಣ್ಯಾಧಿಕಾರಿಗಳ ತಂಡ ಕಳ್ಳಬೇಟೆಗಾರರನ್ನ ಬಂಧಿಸಿದೆ. ಇದರೊಂದಿಗೆ ಕಾರಿನ ಸಮೇತ ಬೇಟೆಯಾಡಲು ಬಳಸಿದ್ದ ವಸ್ತುಗಳನ್ನೂ ವಶಕ್ಕೆ ಪಡೆದಿದೆ. ಬಂಧಿತ 7 ಆರೋಪಿಗಳ ಪೈಕಿ ನಾಲ್ವರು ಬೇಟೆಯಾಡುವುನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು.
ಇನ್ನೂ ಬಂಧಿತರಲ್ಲಿ ನಾಲ್ವರು ಯಾದಗಿರಿ ಮೂಲದವರಾದ್ರೆ, ಉಳಿದ ಮೂವರು ಕನಕಪುರ ಮತ್ತು ಹಾರೋಹಳ್ಳಿ ನಿವಾಸಿಗಳಾಗಿದ್ದಾರೆ.
ಆರೋಪಿಗಳನ್ನು ಬಂಧಿಸಿದ ಅರಣ್ಯಾಧಿಕಾರಿಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದನ್ನೂ ಓದಿ: ಗ್ರಾಹಕರಿಗೆ ಶಾಕ್ – ಗೃಹಬಳಕೆ ಸಿಲಿಂಡರ್ ಬೆಲೆ 29 ರೂ. ಏರಿಕೆ
