-ಮನೆಯಿಂದ ಊಟ ಕಳುಹಿಸುವೆ, ಉಪವಾಸ ಕೈಬಿಡಿ ಸೋನಮ್‌ಗೆ ಮನವಿ
ನವದೆಹಲಿ: ವಿದ್ಯಾರ್ಥಿಗಳೇ ಯೋಚಿಸದಿರಿ, ಪ್ರಧಾನಿ ಮೋದಿ (PM Modi) ಅಭಯ ನೀಡಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುತ್ತೆ, ಪ್ರತಿಭಟನೆ ಕೈಬಿಡುವಂತೆ ಎಂದು ಬಾಲಿವುಡ್ ನಟ ಸಲ್ಮಾನ್ ಖಾನ್ (Salman Khan) ಮನವಿ ಮಾಡಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಶೇರ್ ಮಾಡಿದ್ದಾರೆ. ನೀಟ್ ಪ್ರಶ್ನೆಪತ್ರಿಕೆ (Neet Paper Leak) ಸೋರಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ನಿಮ್ಮ ನಿಮ್ಮ ಮನೆಗೆ ಮರಳಿ. ಯೋಚಿಸದಿರಿ, ಪ್ರಧಾನಿ ಮೋದಿ ಅಭಯ ನೀಡಿದ್ದಾರೆ. ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುತ್ತೆ, ಪ್ರತಿಭಟನೆ ಕೈಬಿಡಿ ಕೇಳಿಕೊಂಡಿದ್ದಾರೆ. ಇದನ್ನೂ ಓದಿ:ದೇಶದಲ್ಲಿ ಮುಂಗಾರು ಮಳೆ ಜೋರು – ಅಲ್ಲಲ್ಲಿ ಅವಾಂತರ ಸೃಷ್ಟಿ, ಜನಜೀವನ ಅಸ್ತವ್ಯಸ್ತ
View this post on Instagram
ವಿದ್ಯಾರ್ಥಿಗಳ ಶಿಕ್ಷಣ ಮತ್ತು ಭದ್ರತೆ ಅತ್ಯಂತ ಮುಖ್ಯ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಯಾವುದೇ ಕಾರಣಕ್ಕೂ ಹೆದರುವ ಅಗತ್ಯವಿಲ್ಲ. ಪ್ರಧಾನಿ ಮೋದಿಯವರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಗೆ ಕಾರಣರಾದವರ ವಿರುದ್ಧ ಅವರು ಖಂಡಿತ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂಬ ನಂಬಿಕೆ ನನಗಿದೆ. ಹೀಗಾಗಿ, ಎಲ್ಲ ವಿದ್ಯಾರ್ಥಿಗಳು ದಯವಿಟ್ಟು ಪ್ರತಿಭಟನೆ ನಿಲ್ಲಿಸಿ, ನಿಮ್ಮ ಮನೆಗೆ ಹಿಂತಿರುಗಿ ಎಂದು ಹೇಳಿದ್ದಾರೆ.
ಸೋನಮ್ ವಾಂಗ್ಚುಕ್ (Sonam Wangchuk) ಅವರಿಗೆ ಆಪ್ತವಾಗಿ ವಿನಂತಿಸಿರುವ ಸಲ್ಮಾನ್ ಖಾನ್, ಸತ್ಯಾಗ್ರಹವನ್ನು ಇಷ್ಟಕ್ಕೇ ನಿಲ್ಲಿಸಿ. ಅಗತ್ಯ ಬಿದ್ದರೆ ಈ ಹೋರಾಟದ ಹುಮ್ಮಸ್ಸನ್ನು ಮತ್ತೊಂದು ದಿನಕ್ಕೆ ಉಳಿಸಿಕೊಳ್ಳಿ. ಮೊದಲು ಏನನ್ನಾದರೂ ತಿನ್ನಿ. ನಿಮಗೇನಾದರೂ ಬೇಕಿದ್ದರೆ, ನಾನು ನನ್ನ ಮನೆಯಿಂದಲೇ ನಿಮಗಾಗಿ ಊಟ ಕಳುಹಿಸಿಕೊಡುತ್ತೇನೆ ಎಂದು ವಿನಂತಿಸಿದ್ದಾರೆ.
ಸಲ್ಮಾನ್ ಖಾನ್ ಅಲ್ಲದೆ ಕರೀನಾ ಕಪೂರ್ ಖಾನ್, ಆಲಿಯಾ ಭಟ್, ಹೃತಿಕ್ ರೋಷನ್, ವರುಣ್ ಧವನ್ ಮತ್ತು ಭೂಮಿ ಪಡ್ನೇಕರ್ ಸೇರಿದಂತೆ ಹಲವು ಬಾಲಿವುಡ್ ನಟ-ನಟಿಯರು ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆಂಬಲ ಸೂಚಿಸಿ ಪ್ರತಿಕ್ರಿಯಿಸಿದ್ದಾರೆ.ಇದನ್ನೂ ಓದಿ: ವೈಫಲ್ಯ ಸರಿ, ಆದರೆ ವಂಚನೆ ಸರಿಯಲ್ಲ: ಸಚಿನ್ ತೆಂಡೂಲ್ಕರ್ ಪೋಸ್ಟ್
