ಮೈಸೂರು: ದೇವರು ಇಂತಹ ಆಹಾರವನ್ನೇ ತಿನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಂರನ್ನು ಸಿದ್ದರಾಮಯ್ಯ ಕೇಳಲಿ, ಅದನ್ನು ಕೇಳಲು ಅವರಿಗೆ ತೊಡೆ ನಡುಗುತ್ತಾ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದರು.
ಮಾಂಸಾಹಾರ ತಿಂದು ದೇವಸ್ಥಾನ ಪ್ರವೇಶ ಮಾಡಬಾರದು ಎಂದು ದೇವರು ಹೇಳಿದ್ದಾನಾ ಎಂಬ ಸಿದ್ದರಾಮಯ್ಯ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
Advertisement
Advertisement
ದೇವರು ಇಂತಹ ಆಹಾರ ತಿಂದು ಬನ್ನಿ ಎಂದು ಹೇಳಿದ್ದಾನಾ ಎಂದು ಮುಸ್ಲಿಂರನ್ನು ಕೇಳಿ. ಮುಸ್ಲಿಂರಿಗೆ ಹಂದಿ ತಿನ್ನಬಾರದು ಎಂದು ಹೇಳಿದ್ದಾರಾ? ದನನೇ ತಿನ್ನಿ ಅಂತಾ ಹೇಳಿದ್ದಾರಾ? ಸಿದ್ದರಾಮಯ್ಯ ಅವರೇ ಅದನ್ನು ಕೇಳಲು ನಿಮಗೆ ತೊಡೆ ನಡುಗುತ್ತಾ? ಅದನ್ನು ಕೇಳಲು ನಿಮಗೆ ಆಗಲ್ವಾ ಎಂದು ಪ್ರಶ್ನಿಸಿದರು.
Advertisement
ಸಿದ್ದರಾಮಯ್ಯ ಅವರು ಮನೆಯಲ್ಲಿ ಕೋಳಿ, ಮೀನು, ಹಂದಿ ಮಾಂಸ ಸೇರಿದಂತೆ ಏನು ಬೇಕಾದರೂ ತಿನ್ನಬಹುದು. ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲಾ ಇದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದರು. ಇದನ್ನೂ ಓದಿ: ಮನೆ ಮನೆಗೆ ಸಾವರ್ಕರ್ ಅಭಿಯಾನ ಆರಂಭ – 6 ರೂ.ಗೆ ಪುಸ್ತಕ ಬಿಡುಗಡೆ
Advertisement
ನೀವು ನಿಮ್ಮ ಮನೆಯಲ್ಲಿ ಯಾವ ಆಹಾರವನ್ನಾದರೂ ತಿನ್ನಿ. ಆದರೆ ದೇವಸ್ಥಾನ ಎನ್ನುವುದು ಪವಿತ್ರ ಸ್ಥಳ. ದೇವಸ್ಥಾನದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಲ್ಲಿಗೆ ಹೋಗಬೇಕಾದರೆ ಮಡಿಯಿಂದ ಹೋಗುತ್ತಾರೆ. ಚಾಮುಂಡಿ ಹಬ್ಬವನ್ನು ಮೈಸೂರಿನ ಹಳ್ಳಿ ಹಳ್ಳಿಯಲ್ಲಿ ಮಾಡುತ್ತಾರೆ. ಬಹಳ ಮಡಿಯಿಂದ ಮೊಸರನ್ನವನ್ನು ನೈವೇದ್ಯ ಅರ್ಪಿಸುತ್ತಾರೆ. ನಂತರ ಮರಿ ಹೊಡೆದುಕೊಂಡು ತಿನ್ನುತ್ತಾರೆ ಎಂದರು.
ಮರಿ ಹೊಡೆದು ತಿನ್ನುವ ಮೈಸೂರಿಗರೇ ಚಾಮುಂಡಿ ಬೆಟ್ಟಕ್ಕೆ ಹೋಗುವಾಗ ಮಡಿಯಿಂದ ಹೋಗುತ್ತಾರೆ. ನೀವು ಯಾವ ಆಹಾರವನ್ನು ಬೇಕಾದರೂ ತಿನ್ನಿ. ನಾನು ಕೂಡ ಎಲ್ಲಾ ಆಹಾರವನ್ನು ತಿನ್ನುತ್ತೇನೆ. ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಬಾರದು ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಮಾಂಸಾಹಾರಿಗಳ ಓಟು ನಮಗೆ ಬೇಡ ಅಂತ ಬಿಜೆಪಿ ಹೇಳಲಿ – ದಿನೇಶ್ ಗುಂಡೂರಾವ್ ಸವಾಲ್
ಈ ಹಿಂದೆ ವೀರಶೈವ ಹಾಗೂ ಲಿಂಗಾಯಿತ ಧರ್ಮ ಒಡೆಯಲು ಹೋದರು. ಅವರು ಪೂಜಿಸುವ ಬಸವೇಶ್ವರ ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಅವರ ಕಿಡಿಕಾರಿದರು.