ವರ್ಕೌಟ್ ವೇಳೆ ಮಾಡಿದ ಒಂದು ಸಣ್ಣ ತಪ್ಪು ನಟಿ ರಕುಲ್ ಪ್ರೀತ್ ಸಿಂಗ್‌ಗೆ (Rakul Preet Singh) ದೊಡ್ಡ ಸಂಕಷ್ಟ ತಂದಿತ್ತು. 80 ಕೆಜಿ ತೂಕ ಎತ್ತುವ ವೇಳೆ ಗಾಯಗೊಂಡಿದ್ದ ಅವರು, ಸುಮಾರು 40 ದಿನಗಳ ಕಾಲ ಬೆಡ್‌ರೆಸ್ಟ್ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ ನೀಡುವ ನಟಿ ರಕುಲ್ ಪ್ರೀತ್ ಸಿಂಗ್ ವರ್ಕೌಟ್ ಮಾಡುವಾಗ ಮಾಡಿಕೊಂಡ ಎಡವಟ್ಟಿನಿಂದ ದೊಡ್ಡ ಅಪಾಯ ತಂದುಕೊಂಡಿದ್ದರು. ಈ ಕುರಿತು ಸ್ವತಃ ನಟಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಜಿಮ್‌ನಲ್ಲಿ ವರ್ಕೌಟ್ ಮಾಡುವ ವೇಳೆ ತಮಗಾದ ಗಾಯದ ಬಗ್ಗೆ ಅವರು ಮಾತನಾಡಿದ್ದಾರೆ. 80 ಕೆಜಿ ತೂಕದ ಡೆಡ್‌ಲಿಫ್ಟ್ ಮಾಡುವಾಗ ಸುರಕ್ಷತಾ ಬೆಲ್ಟ್ ಧರಿಸಿರಲಿಲ್ಲ. ಇದೇ ಕಾರಣದಿಂದ ಬೆನ್ನಿನ ಕೆಳಭಾಗಕ್ಕೆ ಗಂಭೀರ ಗಾಯವಾಗಿತ್ತು ಎಂದು ರಕುಲ್ ಹೇಳಿದ್ದಾರೆ.
ಬಳಿಕ ನನಗೆ ಸ್ಲಿಪ್ ಡಿಸ್ಕ್ ಸಮಸ್ಯೆ ಕಾಣಿಸಿಕೊಂಡಿದ್ದು, ಬರೊಬ್ಬರಿ 40 ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರು. ಗಾಯದ ನೋವಿನ ಜೊತೆಗೆ ಮಾನಸಿಕವಾಗಿಯೂ ಸಾಕಷ್ಟು ತೊಂದರೆ ಅನುಭವಿಸಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಸ್ಯಾಂಡಲ್‌ವುಡ್ ನಟರ ವಿಶಿಷ್ಟ ಪ್ರಯೋಗ – ‘ನಮ್ಮೂರು ನಮ್ಮವರು’ ಮ್ಯೂಸಿಕ್ ಆಲ್ಬಂ ಮೂಲಕ ಜನಜಾಗೃತಿ
ಫಿಟ್ ಆಗಿರಬೇಕು ಎನ್ನುವ ಕಾರಣಕ್ಕೆ ಹಲವರು ಹೆಚ್ಚು ತೂಕ ಎತ್ತಲು ಪ್ರಯತ್ನಿಸುತ್ತಾರೆ. ಆದರೆ ಸುರಕ್ಷತಾ ಕ್ರಮಗಳನ್ನು ಪಾಲಿಸದೇ ಹೋದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ವಿಶೇಷವಾಗಿ ಡೆಡ್‌ಲಿಫ್ಟ್‌ನಂತಹ ವ್ಯಾಯಾಮ ಮಾಡುವಾಗ ಸೇಫ್ಟಿ ಬೆಲ್ಟ್ ಧರಿಸುವುದು ಅತ್ಯಗತ್ಯ. ಒಂದು ಕ್ಷಣದ ನಿರ್ಲಕ್ಷ್ಯವೂ ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು. ಅದಕ್ಕೆ ನಾನೇ ಪ್ರತ್ಯಕ್ಷ ಸಾಕ್ಷಿ ಎಂದು ರಕುಲ್ ಪ್ರೀತ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಾಯಿ ಪಲ್ಲವಿ ಅವಕಾಶ ಕಿತ್ತುಕೊಂಡ ರಶ್ಮಿಕಾ
