ಸಂಗೀತ ಕ್ಷೇತ್ರದ ಖ್ಯಾತ ಗಾಯಕಿ ಎಂ.ಎಸ್ ಸುಬ್ಬಲಕ್ಷ್ಮಿ (M.S. Subbalakshmi) ಜೀವನಾಧಾರಿತ ಸಿನಿಮಾ ಬರುತ್ತಿದೆ. ಈ ಸಿನಿಮಾಗೆ ಸಾಯಿ ಪಲ್ಲವಿ (Sai Pallavi) ನಾಯಕಿ ಎಂದು ಹೇಳಲಾಗಿತ್ತು. ಸುಬ್ಬಲಕ್ಷ್ಮಿ ಪಾತ್ರ ಮಾಡುವುದಕ್ಕಾಗಿಯೇ ಸಾಯಿ ಪಲ್ಲವಿ ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿಯಿತ್ತು. ಸುಬ್ಬಲಕ್ಷ್ಮಿ ಅವರು ಹಾಡಿದ ಪಾಪ್ಯುಲರ್ ಗೀತೆಗಳನ್ನು ಸಾಯಿ ಪಲ್ಲವಿ ಕಲಿಯುತ್ತಿದ್ದಾರೆ ಅಂತಾನೂ ಹೇಳಲಾಗಿತ್ತು. ಆದರೆ, ಈಗ ಪಾತ್ರಧಾರಿಯೇ ಬದಲಾವಣೆ ಆಗಿದೆಯಂತೆ.
ಹೌದು ಸದ್ಯ ಭಾರತೀಯ ಸಿನಿಮಾ ರಂಗದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸುಬ್ಬಲಕ್ಷ್ಮಿ ಪಾತ್ರದಿಂದ ಸಾಯಿ ಪಲ್ಲವಿಯನ್ನು ಕೈಬಿಡಲಾಗಿದೆಯಂತೆ. ಆ ಜಾಗಕ್ಕೆ ರಶ್ಮಿಕಾ ಮಂದಣ್ಣ (Rashmika Mandanna) ಆಯ್ಕೆಯಾಗಿದ್ದಾರೆ ಅನ್ನೋದು ಹೊಸ ಸುದ್ದಿ. ಸಾಯಿ ಪಲ್ಲವಿಯನ್ನು ಕೈ ಬಿಡೋಕೆ ಕಾರಣ ಏನು? ಅನ್ನುವುದು ಈವರೆಗೂ ಗೊತ್ತಾಗಿಲ್ಲ. ಆದರೆ, ಈ ಸಿನಿಮಾದಿಂದ ಸಾಯಿ ಪಲ್ಲವಿ ಹೊರ ಬಂದಿದ್ದಾರೆ ಅನ್ನೋದು ನಿಜವಂತೆ.ಇದನ್ನೂ ಓದಿ: ಪೆದ್ದಿ ಸಿನಿಮಾ ವಿವಾದ – ಜಾಹ್ನವಿ ಕಪೂರ್ ಚಾಟ್ ಲಿಸ್ಟ್ ವೈರಲ್
ಸಾಯಿ ಪಲ್ಲವಿಯನ್ನು ಕೈ ಬಿಟ್ಟಿದ್ದು ಮತ್ತು ರಶ್ಮಿಕಾ ಮಂದಣ್ಣ ಅವರನ್ನು ಆಯ್ಕೆ ಮಾಡಿದ್ದು ಅಧಿಕೃತವಾಗಿ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಮಾತ್ರ ಈ ಸುದ್ದಿ ಸಾಕಷ್ಟು ಸದ್ದು ಮಾಡಿದೆ. ಸಾಯಿ ಪಲ್ಲವಿಯಿಂದ ರಶ್ಮಿಕಾ ಅವಕಾಶ ಕಿತ್ತುಕೊಂಡಿದ್ದಾರೆ ಅಂತ ಚೆರ್ಚೆ ಶುರುವಾಗಿದೆ. ಇದನ್ನೂ ಓದಿ: ವದಂತಿಗೆ ಬ್ರೇಕ್ – ಡೈರೆಕ್ಟರ್ ಬರ್ತ್‌ಡೇ ದಿನವೇ ‘ಟಾಕ್ಸಿಕ್ ಮೇಕಿಂಗ್’ ವಿಡಿಯೋ ರಿಲೀಸ್
