‘ಟಾಕ್ಸಿಕ್’ (Toxic)ಚಿತ್ರದ ಆಕರ್ಷಕ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಜೂನ್ 8 ರಂದು (ಇಂದು) ನಿರ್ದೇಶಕಿ ಗೀತು ಮೋಹನ್‌ದಾಸ್ ಹುಟ್ಟುಹಬ್ಬ(Geetu Mohandas’s birthday)ದ ಹಿನ್ನೆಲೆ 1 ನಿಮಿಷ 2 ಸೆಕೆಂಡ್‌ಗಳ ಮೇಕಿಂಗ್ ಟೀಸರ್ (Making teaser)ರಿಲೀಸ್ ಆಗಿದೆ.
ಮೂಲತಃ ಮಲಯಾಳಂ ನಿರ್ದೇಶಕಿ ಆಗಿರುವ ಗೀತು ಮೋಹನ್‌ದಾಸ್ ಮೊದಲ ಬಾರಿ ಪ್ಯಾನ್ ವರ್ಲ್ಡ್ ಚಿತ್ರ ಮಾಡಿದ್ದು, ತೆರೆಯ ಹಿಂದಿನ ಸರ್ಕಸ್‌ಗಳನ್ನ ಈ ಟೀಸರ್‌ನಲ್ಲಿ ನೋಡಬಹುದಾಗಿದೆ. ಬಿಗ್ ಬಜೆಟ್ ಚಿತ್ರಗಳೆಂದರೆ ಕೇವಲ ಪುರುಷ ನಿರ್ದೇಶಕರಷ್ಟೇ ಮಾಡಬೇಕು ಎಂಬಂತಿದ್ದ ಸಿದ್ಧಸೂತ್ರವನ್ನ ಯಶ್ ಬ್ರೇಕ್ ಮಾಡಿದ್ದಾರೆ.

ಕೆಜಿಎಫ್-2 ಬಳಿಕ ಸಾಲು ಸಾಲು ನಿರ್ದೇಶಕರು ಚಿತ್ರ ಮಾಡಲು ಮುಂದಾಗಿದ್ದರೂ ಗೀತು ಮೋಹನ್‌ದಾಸ್ ಅವರಿಗೆ ಅವಕಾಶ ಕೊಟ್ಟಿದ್ದರು. ತೆರೆಯ ಮುಂದಿನ ಗೀತು ಆರ್ಭಟವನ್ನ ಈ ಹಿಂದೆ ಬಿಡುಗಡೆಯಾದ ಟೀಸರ್‌ನಲ್ಲಿ ನೋಡಿದ್ದಾಗಿದೆ. ಇದೀಗ ಬ್ಯಾಕ್ ಕ್ಯಾಮೆರಾದಲ್ಲಿ ಚಿತ್ರ ಉತ್ತಮವಾಗಿ ಮೂಡಿಬರಲು ಗೀತು ಮಾಡಿರುವ ಸಾಹಸವನ್ನು ಮೇಕಿಂಗ್‌ನಲ್ಲಿ ತೋರಿಸಲಾಗಿದೆ.

ಇದನ್ನೂ ಓದಿ : ಇವರ ಮಕ್ಕಳು, ಅವರ ಮಕ್ಕಳೇ ಕನಸು ಕಾಣಬೇಕು ಅಂತೇನಿಲ್ಲ: ಸುದೀಪ್ ನೆಪೋಟಿಸಂ ಹೇಳಿಕೆಗೆ ಶಿವಣ್ಣ ರಿಯಾಕ್ಷನ್
‘ಟಾಕ್ಸಿಕ್’ ಚಿತ್ರದ ಬಿಡುಗಡೆ ದಿನಾಂಕ ಪದೇ ಪದೇ ಮುಂದಕ್ಕೆ ಹೋಗ್ತಿರೋ ಪರಿಣಾಮ ಚಿತ್ರದ ಮುಕ್ಕಾಲು ಭಾಗ ರೀ ಶೂಟ್ ಮಾಡಲಾಗುತ್ತೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ಗೀತು ಹುಟ್ಟುಹಬ್ಬಕ್ಕೆ ಮೇಕಿಂಗ್ ರಿಲೀಸ್ ಆಗುವುದೇ ಡೌಟ್ ಎನ್ನಲಾಗಿತ್ತು. ಆದರೆ ಎಲ್ಲಾ ವದಂತಿಗೆ ಬ್ರೇಕ್ ಹಾಕುವಂತೆ ಇದೀಗ ಮೇಕಿಂಗ್ ರಿಲೀಸ್ ಆಗಿದೆ. ಅಂದಹಾಗೆ ಟಾಕ್ಸಿಕ್ ಚಿತ್ರ ಇದೇ ವರ್ಷ ತೆರೆ ಕಾಣುವ ಸಂಭವ ಇದೆ. ಇದನ್ನೂ ಓದಿ: ನಟಿ ರುಕ್ಮಿಣಿ ವಸಂತ್ ಬಿಕಿನಿ ಫೋಟೋ ವೈರಲ್ ಪ್ರಕರಣ – ಮೆಟಾಗೆ ಸೈಬರ್ ಕ್ರೈಂ ಪೊಲೀಸರ ಪತ್ರ

