ಟೆಲ್‌ಅವಿವ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ದಾಳಿ ನಿಲ್ಲಿಸಿ ಎಂದು ನೀಡಿದ ಕರೆಯ ನಂತರ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರು ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ನಿಲ್ಲಿಸಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.
ತಾನು ಇಸ್ರೇಲ್ (Isreal) ಮೇಲಿನ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಿದ್ದು, ದಾಳಿಗಳನ್ನು ನಿಲ್ಲಿಸುವುದಾಗಿ ಇರಾನ್ ಸೈನ್ಯ ತಿಳಿಸಿದೆ. ಇರಾನ್ (Iran) ದಾಳಿ ನಿಲ್ಲಿಸಿದ ಬೆನ್ನಲ್ಲೇ ಇಸ್ರೇಲ್ ಕೂಡ ಇರಾನ್ ಮೇಲಿನ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿದೆ.
עדכון חשוב אליכם אזרחי ישראל >> pic.twitter.com/Ycy3vaPWCc
— Benjamin Netanyahu – בנימין נתניהו (@netanyahu) June 8, 2026
ಒಂದು ವೇಳೆ ಇರಾನ್ ಮತ್ತೆ ಇಸ್ರೇಲ್ ಮೇಲೆ ದಾಳಿ ನಡೆಸಿದರೆ, ತಾನು ಅತ್ಯಂತ ಬಲವಾಗಿ ತಿರುಗೇಟು ನೀಡುವುದಾಗಿ ಇಸ್ರೇಲ್ ಪ್ರಧಾನಿ ಎಚ್ಚರಿಸಿದ್ದಾರೆ ಈ ಇಬ್ಬರೂ ವೈರಿಗಳ ನಡುವೆ ಶಾಂತಿ ಒಪ್ಪಂದ ತರಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಯ ಹಂತದ ಮಾತುಕತೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಚುನಾವಣಾ ಚಾಣಕ್ಯ ಸುನೀಲ್ ಕನುಗೋಳು ಈಗ ಸಿಎಂಗೆ ಮುಖ್ಯ ಸಲಹೆಗಾರ
ಲೆಬನಾನ್ ಮತ್ತು ಇರಾನ್‌ನಿಂದ ದಾಳಿ ನಡೆಸಿದರೆ ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಅವರು ಭಾವಿಸಿದ್ದರು. ಆದರೆ ಅದು ನನ್ನ ಅಧಿಕಾರಾವಧಿಯಲ್ಲಿ ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
