‘ಪೆದ್ದಿ’ (peddi)ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಟ ರಾಮ್ ಚರಣ್(Ram Charan) ಅವರಿಗೆ ಥಿಯೇಟರ್ ಭೇಟಿಯ ವೇಳೆ ಅನಿರೀಕ್ಷಿತ ಘಟನೆ ಎದುರಾಗಿತ್ತು. ಏಕಾಏಕಿ ಮಹಿಳಾ ಅಭಿಮಾನಿಯೊಬ್ಬರು ಅವರತ್ತ ಧಾವಿಸಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
‘ಪೆದ್ದಿ’ ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದ್ದು, ಚಿತ್ರತಂಡ ಸಂಭ್ರಮದಲ್ಲಿದೆ. ಚಿತ್ರದ ಯಶಸ್ಸಿನ ಹಿನ್ನೆಲೆಯಲ್ಲಿ ರಾಮ್ ಚರಣ್ ವಿವಿಧ ಥಿಯೇಟರ್‌ಗಳಿಗೆ ಭೇಟಿ ನೀಡಿ ಅಭಿಮಾನಿಗಳ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲೇ ಜನನಾಯಗನ್‌ಗೆ ಸಂಕಷ್ಟ
ಇದೇ ವೇಳೆ ಥಿಯೇಟರ್ ಒಂದರಲ್ಲಿ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದಾಗ ಮಹಿಳಾ ಅಭಿಮಾನಿಯೊಬ್ಬರು ಏಕಾಏಕಿ ರಾಮ್ ಚರಣ್ ಅವರತ್ತ ಓಡಿ ಬಂದಿದ್ದಾರೆ. ಇದರಿಂದ ಕೆಲ ಕ್ಷಣ ರಾಮ್ ಚರಣ್ ಕೂಡ ಅಚ್ಚರಿಗೊಳಗಾದರು. ಕೂಡಲೇ ಅಲ್ಲಿದ್ದ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಆ ಮಹಿಳೆಯನ್ನು ತಡೆದಿದ್ದಾರೆ.<
View this post on Instagram
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭದ್ರತಾ ಸಿಬ್ಬಂದಿಯ ವರ್ತನೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಿಳೆಯನ್ನು ತಡೆಯುವ ವೇಳೆ ಸಿಬ್ಬಂದಿ ಕಠಿಣವಾಗಿ ವರ್ತಿಸಿದ್ದಾರೆ ಎಂಬ ಟೀಕೆಗಳು ಕೇಳಿಬಂದಿವೆ. ಇದನ್ನೂ ಓದಿ: ಅದೊಂದು ತಪ್ಪಿನಿಂದ 40 ದಿನ ಬೆಡ್ ರೆಸ್ಟ್‌ಗೆ ಜಾರಿದ ರಕುಲ್ ಪ್ರೀತ್ ಸಿಂಗ್
ಇನ್ನೊಂದೆಡೆ, ಯಾವುದೇ ಸೆಲೆಬ್ರಿಟಿಯ ಬಳಿ ಹೀಗೆ ಏಕಾಏಕಿ ಧಾವಿಸುವುದು ಸರಿಯಲ್ಲ. ಇದರಿಂದ ಭದ್ರತಾ ಸಮಸ್ಯೆ ಉಂಟಾಗಬಹುದು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.
