ಧಾರವಾಡ: ಮಸೀದಿಗಳಲ್ಲಿ ಹಾಕಲಾಗಿರುವ ಮೈಕ್ ಬಗ್ಗೆ ಕಳೆದ 6 ತಿಂಗಳ ಹಿಂದೆ ತಹಶೀಲ್ದಾರರಿಗೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಸಲ್ಲಿಸಿದ್ದೆವು. ಆ ಬಗ್ಗೆ ಏನೇನು ಕ್ರಮ ಕೈಗೊಂಡಿದ್ದೀರಿ ಎಂಬುದರ ಬಗ್ಗೆ ವಿಚಾರಣೆ ಮಾಡಲು ಇಂದು ಧಾರವಾಡ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿದ್ದೆವು. ಆದರೆ ಅಲ್ಲಿನ ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದಾರೆ. ಈ ಕಚೇರಿಗೆ ಬೀಗ ಹಾಕಬೇಕಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿ ಕಾರಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅವರು, ಇಂದು ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ನಿಸ್ಸಹಾಯಕರಾಗಿ ಮಾತನಾಡಿದ್ದಾರೆ. ಅವರು ಮಸೀದಿಗಳಲ್ಲಿನ ಮೈಕ್‌ಗಳ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಬಳಿ ಸಿಬ್ಬಂದಿ ಇಲ್ಲ, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬ ಹಾರಿಕೆ ಉತ್ತರ ನೀಡಿದ್ದಾರೆ. ನಾವು ಅವರ ಮೇಲೆ ನ್ಯಾಯಾಂಗ ನಿಂದನೆ ಕೇಸ್ ದಾಖಲಿಸುತ್ತೇವೆ ಎಂದಾಗ ಆ ರೀತಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: ಲಿಂಗಾಯತ ಪಂಚಮಸಾಲಿ ಜನಾಂಗವನ್ನು 2ಎ ವರ್ಗಕ್ಕೆ ಸೇರಿಸಬೇಕೆಂಬ ಬೇಡಿಕೆ – ಕೊಡಗಿನಲ್ಲಿ ವಿರೋಧ
Advertisement
Advertisement
ಈ ವಿಚಾರದ ಬಗ್ಗೆ ನಾವು ಮತ್ತೆ ಏಪ್ರಿಲ್ 13 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುತ್ತೇವೆ ಎಂದ ಅವರು ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಕಸಾಯಿ ಖಾನೆಗಳು ಇನ್ನೂ ಇವೆ. ಇನ್ನೂ ಕೂಡ ದನಗಳನ್ನು ಕಡಿಯುತ್ತಿದ್ದಾರೆ ಎಂದರು.
Advertisement
ಎಸಿ ಕಚೇರಿಯಲ್ಲಿ ಅಧಿಕಾರಿಗಳು ಮಜಾ ಉಡಾಯಿಸುತ್ತಿದ್ದಾರೆ. ಶಬ್ದ ಮಾಲಿನ್ಯ ಇವರ ಗಮನಕ್ಕೆ ಬಂದೇ ಇಲ್ವಾ? ರಾಜ್ಯದಲ್ಲಿರುವುದು ಬೇಜವಾಬ್ದಾರಿ ಸರ್ಕಾರ. ಈ ಸರ್ಕಾರ ಡೀಲಾ ಆಗಿದೆ. ರಾಜಕೀಯ ಪಕ್ಷಗಳು ವೋಟಿನ ಆಸೆಗೆ ಜೊಲ್ಲು ಸುರಿಸುತ್ತಿವೆ. ಈ ಕಾನೂನು ಒಬ್ಬರಿಗೆ ಮಾತ್ರ ಅನ್ವಯವಾಗುವುದಿಲ್ಲ. ಎಲ್ಲರೂ ಕಾನೂನು ಪಾಲಿಸಬೇಕು. ಚರ್ಚ್, ಮಸೀದಿಯಲ್ಲಿ ಶಬ್ದ ನಿಲ್ಲಿಸಬೇಕು ಎಂದರು. ಇದನ್ನೂ ಓದಿ: ಹಿಂದೂ-ಮುಸ್ಲಿಂ ನಡುವೆ ವಿಷ ಹಾಕಿ ಬಿಜೆಪಿ ರಾಜಕೀಯ ಲಾಭ ಪಡೆಯಲೆತ್ನಿಸುತ್ತಿದೆ: ಸಿದ್ದರಾಮಯ್ಯ
Advertisement
ನಮ್ಮ ವಿರೋಧ ಇರುವುದು ಪ್ರಾರ್ಥನೆಗೆ ಅಥವಾ ಭಜನೆಗೆ ಅಲ್ಲ. ನಮ್ಮ ವಿರೋಧ ಇರುವುದು ಶಬ್ದಕ್ಕೆ. ಭಜನೆ ಒಂದೇ ಸಮಯ ಆಗುತ್ತದೆ. ಆದರೆ ನಮಾಜ್ ದಿನಕ್ಕೆ ಐದು ಬಾರಿ ಆಗುತ್ತದೆ. ಮಸೀದಿಯಲ್ಲಿ ಕಾನೂನು ಉಲ್ಲಂಘನೆಯಾಗುತ್ತಿದೆ. ಆ ಶಬ್ದ ನಿಲ್ಲಿಸಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.