ಬೆಂಗಳೂರು: ರಾಮಲಿಂಗಾರೆಡ್ಡಿ (Ramalinga Reddy) ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಚಾರವು ಸರ್ಕಾರಕ್ಕೆ ಎಚ್ಚರಿಕೆಯ ಕರೆಗಂಟೆ ಎಂದು ಸಚಿವ ಹೆಚ್.ಕೆ.ಪಾಟೀಲ್ (H.K.Patil) ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಮಾಧ್ಯಮಗಳ ಮೂಲಕ ನೋಡಿದ್ದೇನೆ, ಫೋನ್ ಸಂಪರ್ಕ ಮಾಡಿದ್ದೇನೆ. ಅವರು ಪಕ್ಷದ ಹಿರಿಯರು, ನನ್ನ ಸ್ನೇಹಿತರು, ಮನವೊಲಿಸುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಯಾವ್ ಟ್ರಬಲ್ ಶೂಟರ್ ರೀ – ಸಿಎಂ ಡಿಕೆಶಿಗೆ ಕೆ.ಎನ್ ರಾಜಣ್ಣ ಕೌಂಟರ್
ಅವರಿಗೆ ಅವರದ್ದೆ ಆದ ವಿಶ್ಲೆಷಣೆಯಿದೆ. ನಾನು ಮತ್ತೊಮ್ಮೆ ಮನವಿ ಮಾಡ್ತೇನೆ. ಸಂಬಂಧಪಟ್ಟ ನಾಯಕರು ಗಮನಕೊಟ್ಟು ಬಗೆಹರಿಸಬೇಕು. ಇದು ಸರ್ಕಾರಕ್ಕೆ ಎಚ್ಚರಿಕೆ ಕರೆಗಂಟೆ. ಸಂಬಂಧಪಟ್ಟ ನಾಯಕರು ಗಂಭೀರವಾಗಿ ಗಮನ ಹರಿಸಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಿಂದ ರಾಮಲಿಂಗಾರೆಡ್ಡಿ ಹೊರಬಂದಿದ್ದರೆ. ನಗರಾಭಿವೃದ್ಧಿ ಖಾತೆ ನಿರೀಕ್ಷೆಯಲ್ಲದ್ದ ಅವರಿಗೆ ಹೈಕಮಾಂಡ್ ನಿರಾಸೆ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ತಮಗೆ ಸಿಕ್ಕಿದ್ದ ಜಲಸಂಪನ್ಮೂಲ ಸಚಿವ ಸ್ಥಾನಕ್ಕ ರಾಜೀನಾಮೆ ಕೊಟ್ಟದ್ದಾರೆ. ಇದನ್ನೂ ಓದಿ: ಬೆಂಗಳೂರು ನಗರವನ್ನು ಮತ್ತಷ್ಟು ಬಲಪಡಿಸುವ ಅಗತ್ಯವಿದೆ: ಪರೋಕ್ಷವಾಗಿ ಖಾತೆ ಬಿಟ್ಟುಕೊಡಲ್ಲ ಎಂದ ಕೃಷ್ಣಬೈರೇಗೌಡ
