ಇಂಫಾಲ್: ಮಣಿಪುರದ (Manipur) ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಶುಕ್ರವಾರ ಮುಂಜಾನೆ ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ನ್ಯೂ ಕೈಥೆಲ್‌ಮಾನ್ಬಿ ಪ್ರದೇಶದ ಲೋಯಿಬೋಲ್ ಗ್ರಾಮದ ಮೇಲೆ ಮಾರಕ ದಾಳಿ ನಡೆಸಿದ್ದಾರೆ. ಹಿಂಸಾಚಾರಕ್ಕೆ ಮೂವರು ಬಲಿಯಾಗಿದ್ದು, ಹಲವಾರು ಮನೆಗಳು ಸುಟ್ಟು ಭಸ್ಮವಾಗಿವೆ. ಇದನ್ನೂ ಓದಿ: ದೆಹಲಿ ರೆಸ್ಟೋರೆಂಟ್ ದುರಂತ – 2025ರಲ್ಲೂ ಜೈಲು ಸೇರಿದ್ದ ಹೋಟೆಲ್ ಮಾಲೀಕ
ಮುಂಜಾನೆ 4:10 ರ ಸುಮಾರಿಗೆ ಈ ದಾಳಿ ನಡೆದಿದೆ. ಭಾರೀ ಶಸ್ತ್ರಸಜ್ಜಿತ ದಾಳಿಕೋರರು ಗ್ರಾಮದ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದು, ಗ್ರಾಮದ ನಿವಾಸಿಗಳಲ್ಲಿ ಭೀತಿ ಮೂಡಿಸಿದೆ.
ಮೃತರನ್ನು ಲೆತ್ಖೋಂಗಮ್ ಹಾವೋಕಿಪ್, ಟಿನ್ಮರಿ ಹಾವೋಕಿಪ್ ಮತ್ತು ಜಂಗ್ಮಿನ್ಲಾಲ್ ಹಾವೋಕಿಪ್ ಎಂದು ಗುರುತಿಸಲಾಗಿದೆ. ಪ್ರದೇಶದಲ್ಲಿ ತೀವ್ರ ಗುಂಡಿನ ಚಕಮಕಿ ಮತ್ತು ಬೆಂಕಿ ಇಡುವ ಸುದ್ದಿ ತಿಳಿದ ಬೆನ್ನಲ್ಲೇ ಭದ್ರತಾ ಪಡೆಗಳು ಪ್ರದೇಶಕ್ಕೆ ಧಾವಿಸಿವೆ.
ಇದುವರೆಗೂ ಯಾವುದೇ ಗುಂಪು ಹಿಂಸಾಚಾರದ ಹೊಣೆಯನ್ನು ಹೊತ್ತುಕೊಂಡಿಲ್ಲ. ಸ್ಥಳೀಯ ನಿವಾಸಿಗಳು ಸಶಸ್ತ್ರ ಬಂಡುಕೋರರು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಈ ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇದನ್ನೂ ಓದಿ: ಭಾರತಕ್ಕೆ Su-57 ಸ್ಟೆಲ್ತ್ ಫೈಟರ್ ಜೆಟ್ ಆಫರ್ ನೀಡಿದ ಪುಟಿನ್
