ಶಿವಮೊಗ್ಗ: ಮಹಜರಿಗೆ ಕರೆದೊಯ್ಯುವ ವೇಳೆ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ನರಸಿಂಹ ಕೊಲೆ ಕೇಸ್ (Narasimha Murder Case) ಆರೋಪಿ ಮಧು ಕಾಲಿಗೆ ಪೊಲೀಸರು ಗುಂಡೇಟು ಹೊಡೆದಿರುವ ಘಟನೆ ಶಿವಮೊಗ್ಗ (Shivamogga) ತಾಲೂಕಿನ ಹೊಳೆಬೆನವಳ್ಳಿ ಸಮೀಪದ ರಿಂಗ್ ರೋಡ್‌ನಲ್ಲಿ ನಡೆದಿದೆ.
ಶಿವಮೊಗ್ಗದಲ್ಲಿ ರೌಡಿಶೀಟರ್ (Rowdy Sheetar) ನರಸಿಂಹ ಕೊಲೆ ಕೇಸ್ ಸಂಬಂಧ ಆರೋಪಿಗಳನ್ನು ಸ್ಥಳ ಮಹಜರಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಕೋಟೆ ಠಾಣೆ ಕ್ರೈಮ್ ಸಿಬ್ಬಂದಿ ಅಂಜನಪ್ಪ ಮೇಲೆ ಆರೋಪಿ ಮಧು ಹಲ್ಲೆ ಮಾಡಿದ್ದಾನೆ. ಏರ್ ಫೈರ್ ಮಾಡಿ ವಾರ್ನ್ ಮಾಡಿದರೂ ಮಾತು ಕೇಳದ ಹಿನ್ನೆಲೆ ಕೋಟೆ ಠಾಣೆ ಇನ್ಸ್‌ಪೆಕ್ಟರ್ ಹರೀಶ್ ಪಟೇಲ್ ಕಾಲಿಗೆ ಫೈರ್ ಮಾಡಿದ್ದಾರೆ. ಇದನ್ನೂ ಓದಿ: ಇರಾನ್ ಜೊತೆ ಇಂದು ಡೀಲ್.. ಒಪ್ಪಂದ ಆದ ತಕ್ಷಣ ಹಾರ್ಮುಜ್ ಜಲಸಂಧಿ ಓಪನ್: ಟ್ರಂಪ್
ಗಾಯಾಳು ಮಧು ಹಾಗೂ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಎಸ್ಪಿ ಬಿ. ನಿಖಿಲ್ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನೆಸಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಇದನ್ನೂ ಓದಿ: ಗ್ಯಾರಂಟಿ ಕಳ್ಳಾಟಕ್ಕೆ ಬ್ರೇಕ್; ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ
ಶಿವಮೊಗ್ಗದ ಗಾಂಧಿ ಬಜಾರ್‌ನ 1ನೇ ಕ್ರಾಸ್‌ನ ಕರಿದೇವರ ಕೇರಿಯಲ್ಲಿ ರೌಡಿಶೀಟರ್, ಇಸ್ಪಿಟ್ ಗ್ಯಾಂಬ್ಲರ್ ನರಸಿಂಹ ಹತ್ಯೆಯಾಗಿದ್ದಾನೆ. ಗೋವಿಂದಾಪುರ ಆಶ್ರಯ ಬಡಾವಣೆ ನಿವಾಸಿಯಾದ ರೌಡಿಶೀಟರ್ ನರಸಿಂಹನನ್ನ ಎದುರಾಳಿ ಗ್ಯಾಂಗ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಕೊಲೆ ಕೇಸ್ ಸಂಬಂಧ ಶನಿವಾರ ಕೋಟೆ ಠಾಣೆ ಪೊಲೀಸರು ಮಧು ಸೇರಿದಂತೆ ಐವರನ್ನ ಬಂಧಿಸಿದ್ದರು. ಇದನ್ನೂ ಓದಿ: ಮುಂಗಾರು ಆರಂಭವಾದ್ರೂ ಮಳೆ ಸುಳಿವಿಲ್ಲ – ಕೆಲ ಜಿಲ್ಲೆಗಳ ಜೀವಜಲ ಖಾಲಿ ಖಾಲಿ
