ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಹುನಿರೀಕ್ಷಿತ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ತಿಳಿಸಿದ್ದಾರೆ. ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಹಾರ್ಮುಜ್ ಜಲಸಂಧಿ (Strait Of Hormuz) ಎಲ್ಲರಿಗೂ ಮುಕ್ತವಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಟ್ರೂತ್ ಸೋಶಿಯಲ್‌ನಲ್ಲಿ ಪೋಸ್ಟ್ ಮಾಡಿದ ಟ್ರಂಪ್, ಈ ಒಪ್ಪಂದಕ್ಕೆ ಭಾನುವಾರ ಸಹಿ ಹಾಕಲು ನಿರ್ಧರಿಸಲಾಗಿದೆ. ಸಹಿ ಹಾಕಿದ ತಕ್ಷಣ ಹಾರ್ಮುಜ್ ಜಲಸಂಧಿ ಎಲ್ಲರಿಗೂ ಮುಕ್ತವಾಗಿರುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 24 ಗಂಟೆಗಳಲ್ಲಿ ಅಮೆರಿಕ – ಇರಾನ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ: ಶೆಹಬಾಜ್ ಷರೀಫ್
ನಮ್ಮ ಒಪ್ಪಂದವು ಬರಕ್ ಒಬಾಮಾ ಅವರ ಒಪ್ಪಂದಕ್ಕೆ ವಿರುದ್ಧವಾಗಿದೆ. ಒಬಾಮಾ ಅವರ ಒಪ್ಪಂದವು ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಗುರಿಯನ್ನು ವೇಗವಾಗಿ ತಲುಪಲು ಸಹಾಯ ಮಾಡಿತ್ತು ಎಂದು ಟ್ರಂಪ್ ಅಸಮಾಧಾನ ಹೊರಹಾಕಿದ್ದಾರೆ.
ಬರಾಕ್ ಒಬಾಮಾ ಅವರ ಇರಾನ್ ಜೊತೆಗಿನ ಒಪ್ಪಂದ, ಜೆಸಿಪಿಒಎ, ಪರಮಾಣು ಶಸ್ತ್ರಾಸ್ತ್ರಕ್ಕೆ ಸುಲಭ ಮತ್ತು ಸುಗಮ ಮಾರ್ಗವಾಗಿತ್ತು. ಇರಾನ್ ಇದನ್ನು ಆರು ವರ್ಷಗಳ ಹಿಂದೆಯೇ ಹೊಂದಿತ್ತು. ಇರಾನ್ ಜೊತೆಗಿನ ನನ್ನ ಒಪ್ಪಂದವು ನಿಖರವಾದ ವಿರುದ್ಧವಾಗಿದೆ. ಪರಮಾಣು ಶಸ್ತ್ರಾಸ್ತ್ರ ಹೊಂದುವಂತಿಲ್ಲ. ನಮ್ಮ ಒಪ್ಪಂದ ಅದಕ್ಕೆ ಗೋಡೆ ಆಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಹಡಗು ಮೇಲೆ ದಾಳಿ ನಡೆಸಿದ್ದು ಯಾರು? – ಇರಾನ್ ವಿರುದ್ಧ ಟ್ರಂಪ್ ಕೆಂಡಾಮಂಡಲ
ಇರಾನ್ ಇನ್ನು ಮುಂದೆ ಪರಮಾಣು ಶಸ್ತ್ರಾಸ್ತ್ರವನ್ನು ಬಯಸುವುದಿಲ್ಲ. ಭವಿಷ್ಯದಲ್ಲಿ ಅಭಿವೃದ್ಧಿ ಅಥವಾ ಖರೀದಿಯ ಮೂಲಕ ಅದನ್ನು ಹೊಂದುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ. ಹಿಂದಿನ ಆಡಳಿತಗಳಿಗಿಂತ ಪ್ರಸ್ತುತ ಆಡಳಿತವು ಹೆಚ್ಚು ವಿಭಿನ್ನ ಮತ್ತು ಉತ್ತಮ ಸಂಬಂಧವನ್ನು ಹೊಂದಿದೆ ಎಂದಿದ್ದಾರೆ.
