ಮುಂಬೈ: ಪ್ರಧಾನಿ ನರೇಂದ್ರ ಮೋದಿಯವರನ್ನು (Narendra Modi) ನಾಗ್ಪುರದಲ್ಲಿ (Nagpur) ಡೋಲು (Dhol) ಬಾರಿಸಿ ಸ್ವಾಗತಿಸಲಾಯಿತು. ಈ ವೇಳೆ ಮೋದಿ ಅವರು ಸಹ ಕಲಾವಿದರ ಗುಂಪನ್ನು ಸೇರಿ ಡೋಲನ್ನು ಬಾರಿಸಿದರು.
ಈ ವೀಡಿಯೋವನ್ನು ಪಿಎಂಒ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ಮೋದಿ ಅವರನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಡೋಲು ಬಾರಿಸುತ್ತಿದ್ದವರ ಬಳಿ ಮೋದಿ ತೆರಳಿದ್ದಾರೆ. ಅಲ್ಲಿ ಮೋದಿ ಓರ್ವ ಕಲಾವಿದನ ಪಕ್ಕದಲ್ಲಿ ಡೋಲನ್ನು ಬಾರಿಸಿದರು.
Advertisement
A traditional welcome in Nagpur, Maharashtra. pic.twitter.com/v1Yw75v1o3
— PMO India (@PMOIndia) December 11, 2022
Advertisement
ಪ್ರಧಾನಿ ನರೇಂದ್ರ ಮೋದಿ ಅವರು ನಾಗ್ಪುರ ಹಾಗೂ ಬಿಲಾಸ್‍ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ನಾಗ್ಪುರ ಮತ್ತು ಬಿಲಾಸ್‍ಪುರ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‍ಗೆ ಚಾಲನೆ ನೀಡಲಾಗಿದೆ. ಈ ರೈಲಿನಿಂದ ಸಂಪರ್ಕವು ಗಮನಾರ್ಹವಾಗಿ ವರ್ಧಿಸುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ
Advertisement
Flagged off the Vande Bharat Express between Nagpur and Bilaspur. Connectivity will be significantly enhanced by this train. pic.twitter.com/iqPZqXE4Mi
— Narendra Modi (@narendramodi) December 11, 2022
Advertisement
ಮಹಾರಾಷ್ಟ್ರದಲ್ಲಿ ಸರಣಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ಗೋವಾಕ್ಕೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಪಿಎಂಒ ಟ್ವೀಟ್ ಮಾಡಿದರು. ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್