ಧರ್ಮಶಾಲಾ: ಅಫ್ಘಾನಿಸ್ತಾನ(Afghanistan) ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಸರಣಿಯಲ್ಲಿ 1-0 ಅಂತರದಲ್ಲಿ ಮುನ್ನಡೆ ಪಡೆದಿದೆ. ಈ ನಡುವೆ ರೋಹಿತ್ ಶರ್ಮಾ (Rohit Sharma) ಅವರ ರನೌಟ್ ಬಗ್ಗೆ ಮಾತನಾಡಿದ ನಾಯಕ ಶುಭಮನ್ ಗಿಲ್ (Shubman Gill) ಇದರಲ್ಲಿ ನನ್ನದೇನು ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಗಿಲ್, ರೋಹಿತ್ ಶರ್ಮಾ ಅವರು ಔಟಾಗಿದ್ದು ನಿಜಕ್ಕೂ ದುರದೃಷ್ಟಕರ. ಔಟಾದ ಬಳಿಕ ಸ್ವತಃ ರೋಹಿತ್ ಶರ್ಮಾ ಅವರೇ ರಿಪ್ಲೇ ನೋಡಿ ಇದರಲ್ಲಿ ನಿನ್ನದೇನು ತಪ್ಪಿಲ್ಲ ಬಿಡು, ಎಲ್ಲವೂ ಸರಿಯಿದೆ ಎಂದರು. ರೋಹಿತ್ ಶರ್ಮಾ ಓಡಲು ಮುಂದಾದ ವೇಳೆ ನಾನ್ ಸ್ಟ್ರೈಕರ್ ತುದಿಯಲ್ಲಿದ್ದ ನನಗೆ ಬೌಲರ್ ಅಡ್ಡ ಬಂದ ಕಾರಣ ನಮ್ಮಿಬ್ಬರ ಮಧ್ಯೆ ಸಂವಹನ ಕೊರತೆಯಾಯಿತು ಎಂದು ಸ್ಪಷ್ಟಪಡಿಸಿದ್ದಾರೆ.
If everyone has ears and eyes, its pretty clear that bloody rohit sharma kept running despite seeing shubman gill is stuck with the bowler ahead of him and can’t run any further pic.twitter.com/HwhoouUUJ2
— Shubman-Core💥 (@VihanWahi44569) June 13, 2026
ರನೌಟ್ ಆಗಿದ್ದು ಹೇಗೆ?
ಅಲ್ಲಾಹ್ ಗಜನ್‌ಫರ್ ಎಸೆದ 6ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಬಾಲ್ ಅನ್ನು ಮಿಡ್-ಆನ್ ಕಡೆಗೆ ಬಾರಿಸಿ ಸಿಂಗಲ್ ಕದಿಯುವ ಭರದಲ್ಲಿ ಅರ್ಧ ಪಿಚ್‌ಗೆ ಓಡಿ ಬಂದಿದ್ದರು. ಇತ್ತ ಗಿಲ್ ಅವರಿಗೆ ಬೌಲರ್ ಅಡ್ಡ ಬಂದ್ದಿರಿಂದ ಅವರು ಓಡದೇ ಅಲ್ಲೇ ನಿಂತ ಕಾರಣ ರೋಹಿತ್ ಶರ್ಮಾ ರನೌಟ್ ಆದರು. ಈ ವೇಳೆ ರೋಹಿತ್ ಅವರು ಗಿಲ್ ವಿರುದ್ಧ ಅಸಮಾಧಾನ ಹೊರಹಾಕಿ ಪೆವಿಲಿಯನ್ ಕಡೆ ಹೋದರು. ರೋಹಿತ್ ಶರ್ಮಾ ಅವರ ಇನ್ನಿಂಗ್ಸ್ ಕೇವಲ 16 ರನ್‌ಗಳಿಗೆ ಮೊಟಕುಗೊಂಡಿದ್ದರಿಂದ ನಿರಾಶೆಗೊಂಡಿದ್ದರು. ಇದನ್ನೂ ಓದಿ: ಮತ್ತೊಬ್ಬ ಬೇಬಿ ಬಾಸ್ ಎಂಟ್ರಿ – ಶತಕ ಸಿಡಿಸಿ ಧೂಳೆಬ್ಬಿಸಿದ ವೈಭವ್ ಸೂರ್ಯವಂಶಿ ಸಹೋದರ
ಪಂದ್ಯದ ಪ್ರದರ್ಶನದ ಬಗ್ಗೆ ಮಾತನಾಡಿದ ನಾಯಕ ಗಿಲ್, ಚೊಚ್ಚಲ ಪಂದ್ಯದಲ್ಲೇ ತಲಾ 3 ವಿಕೆಟ್ ಕಬಳಿಸಿ ತಂಡದ ಪರ ಉತ್ತಮ ಪ್ರದರ್ಶನ ನೀಡಿದ ವೇಗಿ ಗುರ್ನೂರ್ ಬ್ರಾರ್ ಮತ್ತು ಎಡಗೈ ಸ್ಪಿನ್ನರ್ ಹರ್ಷ್ ದುಬೆ ಅವರನ್ನು ಶ್ಲಾಘಿಸಿದ್ದಾರೆ.
