ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬ್ಯಾಟಿಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ವೈಭವ್ ಸೂರ್ಯವಂಶಿ (Vaibhav Sooryavanshi) ಕುಟುಂಬದ ಮತ್ತೋರ್ವ ಬ್ಯಾಟ್ಸ್‌ಮನ್ ಇದೀಗ ಎಲ್ಲರ ಗಮನ ಸೆಳೆದಿದ್ದಾರೆ.
ವಾಸ್ತವವಾಗಿ, ಆ ಆಟಗಾರ ವೈಭವ್ ಅವರ ಕಿರಿಯ ಸಹೋದರ ಆಶೀರ್ವಾದ್ ಸೂರ್ಯವಂಶಿ (Aashirwad Sooryavanshi). ವೈಭವ್ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮನ್ನ ತಾವು ಗುರುತಿಸಿಕೊಳ್ಳುತ್ತಿರುವಾಗಲೇ, ಬಿಹಾರದ ಸಮಷ್ಟಿಪುರದಲ್ಲಿ ನಡೆದ ಸ್ಥಳೀಯ ಅಭ್ಯಾಸ ಪಂದ್ಯದಲ್ಲಿ ಅಶೀರ್ವಾದ್ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲು ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಿವೀಸ್ ದಿಗ್ಗಜ ಕೇನ್ ವಿಲಿಯಮ್ಸನ್ ಗುಡ್‌ಬೈ

ಹೌದು. ಬಿಹಾರದಲ್ಲಿ (Bihar) ಕ್ರಿಕೆಟ್ ಅಕಾಡೆಮಿ ತಾಜ್‌ಪುರ ಪರ ಆಡುವಾಗ ಆಶೀರ್ವಾದ್ ಶತಕ (87 ಎಸೆತಗಳಲ್ಲಿ 103) ಬಾರಿಸಿದ್ದಾರೆ. 118.39 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ನಡೆಸಿರುವ ಆಶೀರ್ವಾದ್ 20 ಬೌಂಡರಿಗಳು ಮತ್ತು 1 ಸಿಕ್ಸರ್ ಸಹಿತ ಶತಕ ಸಾಧನೆ ಮಾಡಿದ್ದಾರೆ. ಆಶೀರ್ವಾದ್ ಬ್ಯಾಟಿಂಗ್ ನೆರವಿನಿಂದ ತಂಡವು 29.5 ಓವರ್‌ಗಳಲ್ಲಿ 4 ವಿಕೆಟ್‌ಗೆ 234 ರನ್ ಪೇರಿಸಿತ್ತು. ಇದನ್ನೂ ಓದಿ: ಭಾರತೀಯ ಶೂಟಿಂಗ್ ಲೋಕಕ್ಕೆ ಆಘಾತ: ಮನು ಭಾಕರ್ ಕೋಚ್ ಜಸ್ಪಾಲ್ ರಾಣಾ ಇನ್ನಿಲ್ಲ
ಆಶೀರ್ವಾದ್ ಅವರ ಅಮೋಘ ಶತಕದ ನಂತರ, ಬೇಬಿ ಬಾಸ್ ವೈಭವ್ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಹೋದರನಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಭಿನಂದನೆಗಳು ಆಶೀರ್ವಾದ್ ಎಂದು ಅವರ ಫೋಟೊ ಹಂಚಿಕೊಂಡಿದ್ದಾರೆ.

2026ರ ಐಪಿಎಲ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ನಂತರ ಸೂರ್ಯವಂಶಿ ಈಗಾಗಲೇ ಹಿರಿಯ ಪುರುಷರ ಭಾರತ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರು 16 ಪಂದ್ಯಗಳಲ್ಲಿ 776 ರನ್ ಗಳಿಸುವ ಮೂಲಕ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಹೊರಹೊಮ್ಮಿದರು. ಸಾಯಿ ಸುದರ್ಶನ್, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರಂತಹವರನ್ನ ಹಿಂದಿಕ್ಕಿ ಆರೆಂಜ್ ಕ್ಯಾಪ್ ಗೆದ್ದರು.
