ನವದೆಹಲಿ: ತೃಣಮೂಲ ಕಾಂಗ್ರೆಸ್ (TMC) ಎಲ್ಲಾ ಬಂಡಾಯ ಸಂಸದರು ನ್ಯಾಷನಲಿಸ್ಟ್ ಸಿಟಿಜನ್ ಪಾರ್ಟಿ(NCP) ಜೊತೆ ವಿಲೀನಗೊಳ್ಳುವ ಸಾಧ್ಯತೆಯಿದೆ.
ಎನ್‌ಸಿಪಿ ಅಸ್ಸಾಂ, ತ್ರಿಪುರ, ಬಂಗಾಳ, ಈಶಾನ್ಯ ಮತ್ತು ಇತರ ಪ್ರದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಅವರು ಈ ಪಕ್ಷದೊಂದಿಗೆ ವಿಲೀನಗೊಂಡು ಎನ್‌ಡಿಎಗೆ ತಮ್ಮ ಬೆಂಬಲವನ್ನು ನೀಡಲಿದ್ದಾರೆ.
ಈ ಸಂಸದರು ನೇರವಾಗಿ ಬಿಜೆಪಿ ಅಥವಾ ಎನ್‌ಡಿಎ ಕೂಟವನ್ನು ಸೇರುವ ಬದಲಿಗೆ, ತಾಂತ್ರಿಕವಾಗಿ ಎನ್‌ಸಿಪಿ ಜೊತೆ ವಿಲೀನವಾಗಲಿದ್ದಾರೆ.
ಸಂಸದರಾದ ಕಾಕೋಲಿ ಘೋಷ್ ದಸ್ತೀದಾರ್, ಸುದೀಪ್ ಬಂಡೋಪಾಧ್ಯಾಯ ಮತ್ತು ಶತಾಬ್ದಿ ರಾಯ್ ನೇತೃತ್ವದ ಬಂಡಾಯ ಸಂಸದರ ಗುಂಪು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಪ್ರತ್ಯೇಕವಾಗಿ ಕೂರಲು ಆಸನ ವ್ಯವಸ್ಥೆ (Separate Sitting Arrangement) ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಓಂ ಬಿರ್ಲಾ ಅವರ ಭೇಟಿಯ ನಂತರ ಸುದೀಪ್ ಬಂಡೋಪಾಧ್ಯಾಯ ಪ್ರತಿಕ್ರಿಯಿಸಿ, ನಾವು ರಾಷ್ಟ್ರೀಯತಾವಾದಿ ನಾಗರಿಕರ ಪಕ್ಷಕ್ಕೆ ಸೇರಿದ್ದೇವೆ. ಇದು ಒಂದು ರಾಜಕೀಯ ಪಕ್ಷ. ಇದು ಮಾನ್ಯತೆ ಪಡೆದ ಪ್ರಾದೇಶಿಕ ಪಕ್ಷ. ನಾವು ಅದರೊಂದಿಗೆ ವಿಲೀನಗೊಂಡಿದ್ದೇವೆ. ನಿಜವಾದ ಟಿಎಂಸಿ ಯಾವುದು ಎಂಬುದನ್ನು ನ್ಯಾಯಾಲಯದಲ್ಲಿ ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ.
#WATCH | Delhi: TMC rebel MP Sudip Bandyopadhyay says, “We have joined the Nationalist Citizens’ Party. This is a political party. It is a recognised regional party. We have merged with it… It will be decided in the court which one the real TMC is.” pic.twitter.com/BEbG5atOUx
— ANI (@ANI) June 14, 2026
ಅಭಿಷೇಕ್ ಬ್ಯಾನರ್ಜಿ ಪತ್ರ
ಇನ್ನೊಂದು ಕಡೆ ಮೂಲ ಟಿಎಂಸಿ ಪಕ್ಷದ ಸಂಸದರಾದ ಕೀರ್ತಿ ಆಜಾದ್ ಮತ್ತು ಸಾಗರಿಕಾ ಘೋಷ್ ಅವರೂ ಸಹ ಸ್ಪೀಕರ್ ಓಂ ಬಿರ್ಲಾ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಇದನ್ನೂ ಓದಿ:ವಾಹನಗಳಲ್ಲಿ 100% ಎಥೆನಾಲ್ ಬಳಕೆ ಗಡ್ಕರಿ ಸಹಿ – ಶೀಘ್ರವೇ ಟೊಯೋಟಾ, ಹ್ಯುಂಡೈ, ಎಂಜಿ ಕಾರುಗಳು ಬಿಡುಗಡೆ
ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಬರೆದಿರುವ ಅಧಿಕೃತ ಪತ್ರವನ್ನು ಇವರು ಸ್ಪೀಕರ್‌ಗೆ ಹಸ್ತಾಂತರಿಸಿದ್ದಾರೆ. ಟಿಎಂಸಿ ಪಕ್ಷದಿಂದ ದೂರವಾಗಿರುವ ಯಾವುದೇ ಬಂಡಾಯ ಗುಂಪಿಗೆ ಸಂಸತ್ತಿನಲ್ಲಿ ಯಾವುದೇ ರೀತಿಯ ಅಧಿಕೃತ ಮಾನ್ಯತೆ, ಸ್ಥಾನಮಾನ ಅಥವಾ ಸೌಲಭ್ಯಗಳನ್ನು ನೀಡಬಾರದು ಎಂದು ಈ ಪತ್ರದಲ್ಲಿ ಒತ್ತಾಯಿಸಿದ್ದಾರೆ.
