ಇತ್ತೀಚೆಗೆ ನಡೆದ ಐಪಿಎಲ್ ಫೈನಲ್ ವೇಳೆ ನಟಿ ಅನುಷ್ಕಾ ಶರ್ಮಾ (Anushka Sharma) ಧರಿಸಿದ್ದ ತುಳಸಿ ಕಂಠಿ ಮಾಲೆ (Tulsi Kanthi Mala) ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಅದರ ಬೇಡಿಕೆಯೂ ಹೆಚ್ಚಾಗಿದೆ.
ಈ ತಿಂಗಳ ಆರಂಭದಲ್ಲಿ ನಡೆದ ಆರ್‌ಸಿಬಿ (RCB) ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಐಪಿಎಲ್ ಫೈನಲ್ ಪಂದ್ಯದಲ್ಲಿ ಅನುಷ್ಕಾ ಶರ್ಮಾ ಧರಿಸಿದ್ದ ತುಳಸಿ ಕಂಠಿ ಮಾಲೆ ಎಲ್ಲರ ಗಮನ ಸೆಳೆದಿತ್ತು. ಬಳಿಕ ಹಲವು ಬ್ರ್ಯಾಂಡ್‌ಗಳ ತುಳಸಿ ಮಾಲೆಗಳು ಆನ್ಲೈನ್‌ನಲ್ಲಿ ಹೆಚ್ಚು ಮಾರಾಟವಾಗುತ್ತಿವೆ.
ಇನ್‌ಸ್ಟಾಗ್ರಾಂ ಸ್ಟೋರ್ ‘ಐ ಲವ್ ಮಾಯಾಪುರ’ ಸಂಸ್ಥಾಪಕ ಪೀಟರ್ ಪ್ಯಾನ್ಸ್ಟಿಂಗಲ್ ಪ್ರಕಾರ, ಕಳೆದ ಕೆಲವು ವಾರಗಳಲ್ಲಿ ತುಳಸಿ ಮಾಲೆಗಳ ಮಾರಾಟದಲ್ಲಿ ಶೇ.10 ರಿಂದ 15ರಷ್ಟು ಏರಿಕೆ ಕಂಡುಬಂದಿದೆ. ಹಲವರು ಅನುಷ್ಕಾ ಧರಿಸಿದ್ದ ಅದೇ ಮಾಲೆ ಬೇಕೆಂದು ಕೇಳುತ್ತಿರುವುದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: 400 ಸಿನಿಮಾ ಪೂರೈಸಿದ ರಂಗಾಯಣ ರಘು
ವೃಂದಾವನ ಮೂಲದ ‘ಪ್ಯೂರ್ ತುಳಸಿ ಮಾಲಾ’ ಸಂಸ್ಥೆಯ ರೋಹಿತ್ ಗುಪ್ತಾ ಅವರ ಪ್ರಕಾರ, ವಿಶೇಷವಾಗಿ ಅನುಷ್ಕಾ ಧರಿಸಿದ್ದ ಗಾಢ ಬಣ್ಣದ ಮಾಲೆ ಬೇಕೆಂದು ಬಹಳ ಜನ ಕೇಳಿದ್ದಾರೆ.
ಮಾಲೆಯ ವಿಶೇಷತೆ:
ಸಾಂಪ್ರದಾಯಿಕವಾಗಿ ತುಳಸಿ ಕಂಠಿ ಮಾಲೆಯನ್ನು ಶ್ರೀಕೃಷ್ಣನ ಭಕ್ತಿಯ ಸಂಕೇತವಾಗಿ ಧರಿಸಲಾಗುತ್ತದೆ. ತುಳಸಿ ಗಿಡದ ಕಾಂಡದಿಂದ ತಯಾರಿಸುವ ಈ ಮಾಲೆಗಳ ಬೆಲೆ ಸಾಮಾನ್ಯವಾಗಿ ₹150 ರಿಂದ ₹700ರ ವರೆಗೆ ಇರುತ್ತದೆ.
ಅನುಷ್ಕಾ ಶರ್ಮಾ ಮತ್ತು ಅವರ ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿ, ವೃಂದಾವನದ ಆಧ್ಯಾತ್ಮಿಕ ಗುರು ಪ್ರೇಮಾನಂದ ಗೋವಿಂದ ಶರಣ್ ಅವರ ಅನುಯಾಯಿಗಳಾಗಿದ್ದಾರೆ. ಅನುಷ್ಕಾ ಹೆಚ್ಚಾಗಿ ಎರಡು ಸುತ್ತಿನ ತುಳಸಿ ಮಾಲೆ ಧರಿಸಿರುವುದು ಕಂಡುಬರುತ್ತದೆ.
ಒಂದು ಅಥವಾ ಎರಡು ಸುತ್ತಿನ ತುಳಸಿ ಕಂಠಿ ಮಾಲೆಯನ್ನು ಶ್ರೀಕೃಷ್ಣ ಭಕ್ತರು ಹಾಗೂ ವೈಷ್ಣವ ಸಂಪ್ರದಾಯದ ಅನುಯಾಯಿಗಳು ಧರಿಸುತ್ತಾರೆ. ಮೂರು ಸುತ್ತಿನ ಮಾಲೆಯನ್ನು ಗುರುಗಳಿಂದ ದೀಕ್ಷೆ ಪಡೆದ ಭಕ್ತರು ಧರಿಸುವ ಸಂಪ್ರದಾಯವಿದೆ ಇಸ್ಕಾನ್ ದ್ವಾರಕಾದ ತುಷ್ಟ್ ಗೌರ್ ಅವರು ತಿಳಿಸಿದ್ದಾರೆ. ಇದನ್ನೂ ಓದಿ: ʻಕಾಲಾ ಹಿರಣ್ʼ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್
