– ಕಾಜೋಲ್ ಮಾತಿಗೆ ನಾಚಿ ನೀರಾದ ಅಮೀರ್
ಬಾಲಿವುಡ್ ನಟ ಅಮೀರ್ ಖಾನ್ ಅವರ ಮೂರನೇ ಮದುವೆಗೆ ನಟಿ ಕಾಜೋಲ್ ಮಾಡಿದ ತಮಾಷೆಯ ಕಾಮೆಂಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಅಮೀರ್ ಖಾನ್ ಪ್ರೊಡಕ್ಷನ್ಸ್‌ಗೆ 25 ವರ್ಷ ತುಂಬಿದ ಸಂಭ್ರಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಜೋಲ್, ಅಮೀರ್ ಖಾನ್ ಅವರ ಮೂರನೇ ಮದುವೆ ಕುರಿತು ಹಾಸ್ಯಮಯವಾಗಿ ರಿಯಾಕ್ಷನ್ ಕೊಟ್ಟಿದ್ದಾರೆ.
ಅಮೀರ್ ಖಾನ್ ಪ್ರೊಡಕ್ಷನ್ಸ್ 25ನೇ ವರ್ಷದ ಸಂಭ್ರಮಾಚರಣೆಯಲ್ಲಿ ಹಲವು ನಟರು, ನಿರ್ದೇಶಕರು ಮತ್ತು ತಂತ್ರಜ್ಞರು ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಕಾಜೋಲ್, ಅಮೀರ್ ಅವರ ನಿರ್ಮಾಣ ಸಂಸ್ಥೆ ಉತ್ತಮ ಸಿನಿಮಾಗಳನ್ನು ನೀಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಇದನ್ನೂ ಓದಿ: ಐಪಿಎಲ್‌ನಲ್ಲಿ ಗಮನ ಸೆಳೆದ ಅನುಷ್ಕಾ ತುಳಸಿ ಮಾಲೆ – ಆನ್ಲೈನ್ ಖರೀದಿಗೆ ಮುಗಿಬಿದ್ದ ಭಕ್ತರು
ಅಮೀರ್ ಖಾನ್ ಅವರಿಗೆ ಸಿನಿಮಾಗಳ ಆಯ್ಕೆಯಲ್ಲಿ ಅದ್ಭುತ ಅಭಿರುಚಿ ಇದೆ. ‘ಲಗಾನ್’ ಚಿತ್ರದ ಮೂಲಕ ಆರಂಭವಾದ ಅವರ ಪಯಣ ಇಂದಿಗೂ ಯಶಸ್ವಿಯಾಗಿ ಮುಂದುವರಿದಿದೆ ಎಂದು ಕಾಜೋಲ್ ಹೇಳಿದರು.
ಇದಾದ ಬಳಿಕ ತಮಾಷೆಯಾಗಿ, “ಸಿನಿಮಾಗಳಷ್ಟೇ ಅಲ್ಲ, ಮಹಿಳೆಯರ ಆಯ್ಕೆಯಲ್ಲೂ ಅವರಿಗೆ ಉತ್ತಮ ಅಭಿರುಚಿ ಇದೆ” ಎಂದು ಹೇಳಿ ಅಮೀರ್ ಅವರನ್ನು ಕೆಣಕಿದರು. ಕಾಜೋಲ್ ಅವರ ಈ ಮಾತಿಗೆ ಸಭಾಂಗಣದಲ್ಲಿ ಎಲ್ಲರೂ ಜೋರಾಗಿ ನಕ್ಕರು, ಅಮೀರ್ ಕೂಡ ಮುಜುಗರದಿಂದ ನಗುತ್ತ ಸುಮ್ಮನಾದರು.
Kajol, Aamir and Juhi… I’m just saying, give us a movie ASAP!!!!!!!!!! pic.twitter.com/QIX0e1mXFf
— Giss🍷 (@sesangmyy) June 13, 2026
ಅಮೀರ್ ಖಾನ್ ಈ ಹಿಂದೆ ರೀನಾ ದತ್ತಾ ಅವರನ್ನು ವಿವಾಹವಾಗಿದ್ದು, ಬಳಿಕ ಕಿರಣ್ ರಾವ್ ಅವರನ್ನು ಮದುವೆಯಾಗಿದ್ದರು. ಎರಡೂ ದಾಂಪತ್ಯಗಳು ವಿಚ್ಛೇದನದಲ್ಲಿ ಅಂತ್ಯಗೊಂಡಿದ್ದರೂ, ಮಾಜಿ ಪತ್ನಿಯರೊಂದಿಗೆ ಉತ್ತಮ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ.
ಇದೀಗ ಅಮೀರ್ ಖಾನ್ ತಮ್ಮ ಗೆಳತಿ ಗೌರಿ ಸ್ಪ್ರಾಟ್ ಅವರನ್ನು ಜುಲೈ 5ರಂದು ವಿವಾಹವಾಗಲಿದ್ದಾರೆ ಎಂಬ ವರದಿಗಳು ಹರಿದಾಡುತ್ತಿವೆ. ಈ ನಡುವೆಯೇ ಕಾಜೋಲ್ ಅವರ ತಮಾಷೆಯ ಮಾತುಗಳು ಅಭಿಮಾನಿಗಳ ಗಮನ ಸೆಳೆದಿವೆ.ಇದನ್ನೂ ಓದಿ: 400 ಸಿನಿಮಾ ಪೂರೈಸಿದ ರಂಗಾಯಣ ರಘು
ಕಾರ್ಯಕ್ರಮದಲ್ಲಿ ‘ಇಷ್ಕ್’ ಚಿತ್ರದ ಸಹನಟಿಯರಾದ ಕಾಜೋಲ್ ಮತ್ತು ಜೂಹಿ ಚಾವ್ಲಾ ಕೂಡ ಅಮೀರ್ ಜೊತೆ ವೇದಿಕೆ ಹಂಚಿಕೊಂಡಿದ್ದು, ಹಲವು ಹಳೆಯ ನೆನಪುಗಳು ಮತ್ತೆ ಜೀವಂತವಾದವು.
