ನೆಲಮಂಗಲ: ನಗರದಲ್ಲಿ (Nelamangala) ಬಿರುಗಾಳಿ ಸಹಿತ ಸುರಿದ ಭಾರೀ ಮಳೆಗೆ (Rain) ಜನರು ತತ್ತರಿಸಿ ಹೋಗಿದ್ದಾರೆ. ಕೆಲಕಾಲ ಸುರಿದ ಜೋರು ಮಳೆ ಸಾಕಷ್ಟು ಅವಾಂತರವನ್ನೇ ಸೃಷ್ಟಿಸಿದೆ.

ವರುಣನ ಆರ್ಭಟಕ್ಕೆ ನೆಲಮಂಗಲ – ಸೊಂಡೆಕುಪ್ಪ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದೆ. ರಸ್ತೆಯಲ್ಲಿ ಮಂಡಿಯಷ್ಟು ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ಹಳ್ಳದಂತಾದ ರಸ್ತೆಯಲ್ಲಿ ಹಲವು ವಾಹನಗಳು ಕೆಟ್ಟು ನಿಂತಿದ್ದವು. ಇದನ್ನೂ ಓದಿ: ಪ್ರಿಯತಮೆ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ – 1 ವರ್ಷದ ಹಿಂದೆ ಕದ್ದುಮುಚ್ಚಿ ಮದ್ವೆಯಾಗಿದ್ದ ಭವಾನಿ – ಚಂದ್ರಶೇಖರ್
ಕೆಟ್ಟು ನಿಂತ ವಾಹನಗಳನ್ನು ಸವಾರರು ತಳ್ಳುತ್ತ ಸಾಗಿದ್ದಾರೆ. ಅಲ್ಲದೇ ಮರವೊಂದು ಬಿದ್ದ ಪರಿಣಾಮ ಕಾರು ಬೈಕ್ ಜಖಂಗೊಂಡಿವೆ. ಒಟ್ಟಾರೆ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ ಪ್ರಿಯತಮೆಯ ಕತ್ತು ಹಿಸುಕಿ ಕೊಲೆ – ವಿಷ ಸೇವಿಸಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ
