ನೈಸ್: ಎರಡು ರಾಷ್ಟ್ರಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಮೊದಲ ಹಂತವಾಗಿ ಫ್ರಾನ್ಸ್‌ನ ಕರಾವಳಿ ನಗರವಾದ ನೈಸ್‌ಗೆ (Nice) ತಲುಪಿದ್ದಾರೆ. ಅಲ್ಲಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್(Emmanuel Macron) ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ನೈಸ್ ನಗರದ ‘ವಿಲ್ಲಾ ಕೆರಿಲೋಸ್’ ನಲ್ಲಿ ಉಭಯ ನಾಯಕರು ರಕ್ಷಣೆ, ಬಾಹ್ಯಾಕಾಶ ಮತ್ತು ಮುಂದುವರಿದ ತಂತ್ರಜ್ಞಾನ ಕ್ಷೇತ್ರಗಳ ಸಹಕಾರದ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಇದಕ್ಕೂ ಮೊದಲು ಮೋದಿ ಮತ್ತು ಮ್ಯಾಕ್ರನ್ ಅವರು ಜಂಟಿಯಾಗಿ ನೈಸ್‌ನ ‘ಪ್ಯಾಲೈಸ್ ಡೆಸ್ ಎಕ್ಸ್‌ಪೋಸಿಷನ್ಸ್’ ನಲ್ಲಿ ಭಾರತದ ನಾವೀನ್ಯತೆ ಹಾಗೂ ಸ್ಟಾರ್ಟ್‌ಅಪ್‌ಗಳನ್ನು ಪ್ರದರ್ಶಿಸುವ ‘ಭಾರತ್ ಇನೋವೇಟ್ಸ್ 2026’ ಪ್ರದರ್ಶನವನ್ನು ಉದ್ಘಾಟಿಸಿದರು.
India and France will keep working together to boost economic ties. The India-EU FTA provides unparalleled momentum in this regard. We are also launching an Economic Security Dialogue to ensure stronger supply chains in critical minerals and technology. Other areas where we will… pic.twitter.com/8B9FLRO2ep
— Narendra Modi (@narendramodi) June 14, 2026
ಕಾರ್ಯಕ್ರಮದಲ್ಲಿ ಮಾತನಾಡಿದ ಮ್ಯಾಕ್ರನ್ ಅವರು, ಸ್ವಾತಂತ್ರ್ಯದ ನಂತರ ಭಾರತದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂದು ಮೋದಿಯವರನ್ನು ಶ್ಲಾಘಿಸಿದರು. ಭಾರತವು ಜಾಗತಿಕ ಆವಿಷ್ಕಾರಗಳ ಮುಂಚೂಣಿಯಲ್ಲಿದೆ ಎಂದು ಕೊಂಡಾಡಿದರು
ಮೋದಿ ಅವರು ಜಾಗತಿಕ ಸಾಹಸೋದ್ಯಮ ಬಂಡವಾಳ ಹೂಡಿಕೆದಾರರ (Venture Capitalists) ಜೊತೆ ಸಂವಾದ ನಡೆಸಿ ಭಾರತದ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನ ನೀಡಿದರು.
Bharat innovates with scale and speed.
Bharat innovates for a sustainable future.
And Bharat innovates for the whole world.@BharatInnov2026 pic.twitter.com/1CBpja6Pxt
— Narendra Modi (@narendramodi) June 14, 2026
ಆರಂಭದಲ್ಲಿ ಅನಿವಾಸಿ ಭಾರತೀಯರು ಮೋದಿಯವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಫ್ರೆಂಚ್ ಮತ್ತು ಇಟಾಲಿಯನ್ ಕಲಾವಿದರು ಕಥಕ್ ಹಾಗೂ ಭರತನಾಟ್ಯ ನೃತ್ಯಗಳನ್ನು ಪ್ರಸ್ತುತಪಡಿಸಿದರು
ನೈಸ್‌ನಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿದ ನಂತರ, ಪ್ರಧಾನಿ ಮೋದಿ ಅವರು ತಮ್ಮ ಮುಂದಿನ ಹಂತದ ಪ್ರವಾಸಕ್ಕಾಗಿ ಸ್ಲೋವಾಕಿಯಾ ದೇಶಕ್ಕೆ ತೆರಳಲಿದ್ದಾರೆ.
🇮🇳🇫🇷 pic.twitter.com/MD1gMC04dp
— Emmanuel Macron (@EmmanuelMacron) June 14, 2026
