– ಅಧಿಕ ಮಾಸದ ಹಿನ್ನೆಲೆ ಚಿನ್ನದ ಬೇಡಿಕೆ ಇನ್ನೂ ಕಡಿಮೆ
ಬೆಂಗಳೂರು: ದೇಶದಲ್ಲಿ ಚಿನ್ನದ ಖರೀದಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಚಿನ್ನದ (Gold Import) ಆಮದು ಪ್ರಮಾಣದಲ್ಲೂ ಭಾರಿ ಇಳಿಕೆ ಕಂಡುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತ (India) 27 ಟನ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ ಈ ಬಾರಿ ಕೇವಲ 7.5 ಟನ್ ಚಿನ್ನ ಮಾತ್ರ ಆಮದಾಗಿದೆ ಎಂದು ವರದಿಗಳು ತಿಳಿಸಿವೆ. ಇದರೊಂದಿಗೆ ಚಿನ್ನದ ಆಮದು ಪ್ರಮಾಣದಲ್ಲಿ ಸುಮಾರು 70% ಇಳಿಕೆ ದಾಖಲಾಗಿದೆ. ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ಹಲವು ನಗರಗಳಲ್ಲಿ ಚಿನ್ನದ ವ್ಯಾಪಾರ 50% ರಿಂದ 70% ಕುಸಿದಿದೆ ಎಂದು ಚಿನ್ನಾಭರಣ ವ್ಯಾಪಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ನನಗೂ ಟೆಸ್ಟ್ ಕ್ರಿಕೆಟ್ ಆಡೋ ಆಸೆಯಿದೆ ಎಂದ ಸೂರ್ಯವಂಶಿ: ಟೀಮ್ ಇಂಡಿಯಾಕ್ಕೆ ಆಯ್ಕೆಯಾಗ್ತಾರಾ ಬಿಗ್ ಹಿಟ್ಟರ್?
ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳವಾದ ಬಳಿಕ ಚಿನ್ನದ ವ್ಯಾಪಾರದಲ್ಲಿ ಕುಸಿತ ಕಂಡುಬಂದಿದೆ ಎಂದು ವ್ಯಾಪಾರ ವಲಯ ತಿಳಿಸಿದೆ. ಬೇಡಿಕೆ ಕಡಿಮೆಯಾಗಿರುವ ಕಾರಣ ಚಿನ್ನಾಭರಣ ಅಂಗಡಿಗಳಲ್ಲೂ ವಹಿವಾಟು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ ಎಂದು ಹೇಳಲಾಗಿದೆ.
ಇದೇ ವೇಳೆ, ಅಧಿಕ ಮಾಸದ ಹಿನ್ನೆಲೆ ಮದುವೆ ಹಾಗೂ ಇತರ ಶುಭಕಾರ್ಯಗಳು ಕಡಿಮೆಯಾಗಿರುವುದರಿಂದ ಚಿನ್ನದ ಬೇಡಿಕೆ ಇನ್ನೂ ಇಳಿಕೆಯಾಗಿದೆ.ಇದನ್ನೂ ಓದಿ: ಹನಿಮೂನ್‌ಗೆ ಹೊರಟಿದ್ದಾಗ ಹೆಲಿಕಾಪ್ಟರ್ ಪತನ – ಮದುವೆಯಾದ ಕೆಲವೇ ಹೊತ್ತಲ್ಲಿ ಪತ್ನಿಯ ಮಡಿಲಲ್ಲೇ ಪ್ರಾಣಬಿಟ್ಟ ಭಾರತೀಯ ಮೂಲದ ಪೈಲಟ್
ಚಿನ್ನ ಖರೀದಿ ಇಳಿಕೆಗೆ ಕಾರಣ:
ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತು ಜಾಗತಿಕ ಇಂಧನ ಬೆಲೆ ಏರಿಕೆಯ ಹಿನ್ನೆಲೆಯಲ್ಲಿ, ದೇಶದ ಆರ್ಥಿಕತೆಯನ್ನು ರಕ್ಷಿಸಲು ಪ್ರಮುಖ ಮಿತವ್ಯಯ ಕ್ರಮಗಳನ್ನು ಪಾಲಿಸುವಂತೆ ದೇಶದ ಜನರಿಗೆ ಕರೆ ನೀಡಿದ್ದರು. ಈ ಮಿತವ್ಯಯ ಕ್ರಮಗಳಲ್ಲಿ ಚಿನ್ನ ಖರೀದಿಯನ್ನು ಕಡಿಮೆ ಮಾಡುವುದು ಸಹ ಪ್ರಮುಖವಾಗಿತ್ತು. ಜಗತ್ತಿನಲ್ಲೇ ಹೆಚ್ಚು ಚಿನ್ನವನ್ನು ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಚೀನಾ ಮೊದಲನೇ ಸ್ಥಾನದಲ್ಲಿದ್ದು, ಭಾರತ ಎರಡನೇ ಸ್ಥಾನದಲ್ಲಿದೆ.
ದೇಶದಲ್ಲಿ ಮಧ್ಯಮವರ್ಗದವರಿಂದ ಹಿಡಿದು ಪ್ರತೀ ಭಾರತೀಯನೂ ಚಿನ್ನದ ಮೇಲೆ ಹೂಡಿಕೆ ಮಾಡುವುದರಿಂದ ಚಿನ್ನಕ್ಕೆ ಹೆಚ್ಚಿನ ಬೇಡಿಕೆ ಇದೆ. ಆದರೆ ಇದರಿಂದ ಆಮದು ಶುಲ್ಕಕ್ಕೆ ಹೆಚ್ಚಿನ ಹಣ ವ್ಯಯವಾಗುತ್ತದೆ. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ನಿಯಂತ್ರಣ ಕಳೆದುಕೊಳ್ಳುತ್ತದೆ. ಈ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮಿತವ್ಯಯ ಕರೆ ನೀಡಿದ್ದರು. ಇದರನುಸಾರ ಭಾರತೀಯರು ಎಷ್ಟೇ ಆಭರಣ ಪ್ರಿಯರಾಗಿದ್ದರೂ ಚಿನ್ನದ ಮೇಲಿನ ವ್ಯಾಮೋಹವನ್ನು ಕೆಲ ದಿನಗಳ ಕಾಲ ಬದಿಗಿಟ್ಟು ಬಂಗಾರ ಖರೀದಿಯನ್ನು ಕಡಿಮೆ ಮಾಡಿದ್ದಾರೆ.ಇದನ್ನೂ ಓದಿ: 41 ಕೋಟಿಯ ಬೌಲಿಂಗ್ ಬ್ರಿಗೇಡ್ ಸೂಪರ್ ಹಿಟ್: ಆರ್‌ಸಿಬಿಗೆ ಡಬಲ್ ಟ್ರೋಫಿ ತಂದುಕೊಟ್ಟ ಬೌಲರ್ಸ್
