– ರಾಜ್ಯ, ಕೇಂದ್ರದಿಂದ ಬಿಡುಗಡೆಯಾಗುತ್ತಿದ್ದ ಅಕ್ಕಿ ವಿಳಂಬ
ಬೆಂಗಳೂರು: ಈ ತಿಂಗಳು ಅನ್ನಭಾಗ್ಯ (Anna Bhagya) ಅಕ್ಕಿ ವಿತರಣೆಯಲ್ಲಿ ವಿಳಂಬವಾಗಿದೆ. ಜನರಿಗೆ ಇನ್ನೂ ಅಕ್ಕಿ ವಿತರಣೆಯಾಗಿಲ್ಲ.
ಸಾಮಾನ್ಯವಾಗಿ ಮೊದಲ ವಾರದಲ್ಲೇ ಅಕ್ಕಿ ವಿತರಣೆಯಾಗುತ್ತಿತ್ತು. ಆದರೆ, ಈ ತಿಂಗಳು ವಿಳಂಬವಾಗಿದೆ. ರಾಜ್ಯ ಪಡಿತರ ಆಹಾರ ಪದಾರ್ಥಗಳ ವಿತರಕರ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಈ ಬಗ್ಗೆ ‘ಪಬ್ಲಿಕ್ ಟಿವಿ’ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ
ರಾಜ್ಯದಿಂದ 2.17 ಲಕ್ಷ ಮೆಟ್ರಿಕ್ ಟನ್ ಹಾಗೂ ಕೇಂದ್ರದಿಂದ 2.17 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬಿಡುಗಡೆಯಾಗುತ್ತಿತ್ತು. ಆದರೆ, ಈ ಬಾರಿ ವಿಳಂಬವಾಗಿದೆ. ಹೀಗಾಗಿ, ಸಚಿವರನ್ನು ಭೇಟಿ ಮಾಡಿ ಸಮಸ್ಯೆಯ ಬಗ್ಗೆ ಚರ್ಚಿಸಲು ಪಡಿತರ ವಿತರಕರ ಸಂಘ ಮುಂದಾಗಿದೆ.
ಅಕ್ಕಿ ವಿತರಣೆಯಾಗದ ಕಾರಣ ಬೆಂಗಳೂರಿನಲ್ಲಿ ಪಡಿತರ ಅಂಗಡಿಗಳು ಬಂದ್ ಆಗಿವೆ. ನ್ಯಾಯಬೆಲೆ ಅಂಗಡಿಗಳಿಗೆ ಬೀಗ ಹಾಕಲಾಗಿದೆ. ಇದನ್ನೂ ಓದಿ: ಮಳೆಗಾಗಿ ಪಾದಯಾತ್ರೆ ಮಾಡ್ತಿದ್ದಾಗಲೇ ಸುರಿದ ವರುಣ – ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ರೈತರು
