ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (BLR Airport) ಸುತ್ತಮುತ್ತ ಅಕ್ರಮವಾಗಿ ವಾಹನ ನಿಲ್ಲಿಸುವವರಿಗೆ ಇನ್ನು ಎಚ್ಚರಿಕೆ. ವಿಮಾನ ನಿಲ್ದಾಣದ ‘ನೋ ಪಾರ್ಕಿಂಗ್’ ಪ್ರದೇಶಗಳಲ್ಲಿ ಈಗ AI (ಕೃತಕ ಬುದ್ಧಿಮತ್ತೆ) ಆಧಾರಿತ ಕ್ಯಾಮೆರಾಗಳನ್ನು (AI Camera) ಅಳವಡಿಸಲಾಗಿದೆ.
ಬೆಂಗಳೂರು ಟ್ರಾಫಿಕ್ ಪೊಲೀಸರ ಸಹಭಾಗಿತ್ವದಲ್ಲಿ ಈ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ AI ಕ್ಯಾಮೆರಾಗಳು ‘ನೋ ಪಾರ್ಕಿಂಗ್’ ವಲಯಗಳಲ್ಲಿ ನಿಲ್ಲಿಸಿರುವ ವಾಹನಗಳನ್ನು ತಕ್ಷಣ ಗುರುತಿಸಿ, ಉಲ್ಲಂಘನೆಯ ಮಾಹಿತಿಯನ್ನು ದಾಖಲಿಸುತ್ತವೆ.ಇದನ್ನೂ ಓದಿ: ನನ್ನ ಅನುಮತಿ ಇಲ್ಲದೆ ಚಿಕಿತ್ಸೆ ಬೇಡ ಎಂದ ವಾಂಗ್ಚುಕ್ ಪತ್ನಿ

ದಾಖಲಾದ ಮಾಹಿತಿ ನೇರವಾಗಿ ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ರವಾನೆಯಾಗಲಿದೆ. ಇದರಿಂದ ಅಕ್ರಮ ಪಾರ್ಕಿಂಗ್ ಮೇಲೆ ನಿಗಾ ಹೆಚ್ಚುವುದರ ಜೊತೆಗೆ ಸಂಚಾರ ನಿಯಮಗಳ ಜಾರಿಗೂ ನೆರವಾಗಲಿದೆ.
ವಿಮಾನ ನಿಲ್ದಾಣದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆ ಮಾಡಿ, ಪ್ರಯಾಣಿಕರಿಗೆ ಸುಗಮ ಸಂಚಾರ ಕಲ್ಪಿಸುವುದು ಈ ಹೊಸ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.ಇದನ್ನೂ ಓದಿ: ನಟ ಆಮೀರ್ ಖಾನ್‌ಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಕೊಲೆ ಬೆದರಿಕೆ?
