Connect with us

Bengaluru City

ಹೋಮೊ ಸೆಕ್ಸ್ ಗೆ ಬಂದವನನ್ನು ಕೊಲೆ ಮಾಡಿದ್ದ ಜೇಬುಗಳ್ಳ ಅರೆಸ್ಟ್!

Published

on

ಬೆಂಗಳೂರು: ಹೋಮೋಸೆಕ್ಸ್ ಮಾಡುವ ನೆಪದಲ್ಲಿ ಹುಡುಗನನ್ನು ದೋಚಲು ಹೋಗಿ ಕೊಲೆಗೈದಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸ್ರು ಯಶಸ್ವಿಯಾಗಿದ್ದಾರೆ. ಜೇಬುಗಳ್ಳತನ ಮಾಡುತ್ತಿದ್ದ ರಸೂಲ್ ಬಂಧಿತ ಆರೋಪಿ.

ಮುರಳೀಧರ್ ಕೊಲೆಯಾದ ವ್ಯಕ್ತಿ. ಮುರಳೀಧರ್ ಸಲಿಂಗಕಾಮಕ್ಕಾಗಿ ರಸೂಲ್ @ ಆಕಾಶನನ್ನು ಸಂಪರ್ಕಿಸಿದ್ದನು. ಆದ್ರೆ ಮುರುಳೀಧರನನ್ನು ದೋಚುವ ಸಲುವಾಗಿ ಆಕಾಶ್ ಇದಕ್ಕೆ ಒಪ್ಪಿಕೊಂಡಿದ್ದನು.

ಅಂದು ನಡೆದಿದ್ದೇನು?: ಕರಗದ ದಿನ ರಸೂಲ್ ಸಿಕ್ಕಸಿಕ್ಕವರ ಬಳಿಯಲ್ಲಿ ಜೇಬುಗಳ್ಳತನ ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದ. ಅದೇ ಸಂದರ್ಭದಲ್ಲಿ ರಸೂಲ್‍ನ ಮುಂದೆ ಪ್ರತ್ಯಕ್ಷವಾದ ಮುರಳೀಧರ್ ಸಲಿಂಗಕಾಮಕ್ಕೆ ಆಹ್ವಾನ ನೀಡಿದ್ದಾನೆ. ಆಹ್ವಾನ ನೀಡಿದ ಮುರಳೀಧರ್‍ನ ಇದೇ ನೆಪದಲ್ಲಿ ದೋಚಬಹುದು ಅಂದುಕೊಂಡು ರಸೂಲ್ ಮುರಳೀ ಹಿಂದೆಯೇ ಹೋಗಿದ್ದ. ಆದ್ರೆ, ಮುರಳಿ ಆಕಾಶನನ್ನು ತಬ್ಬಿಕೊಳ್ಳಲು ಮುಂದಾಗಿದ್ದನು. ಕೊನೆಗೆ ರಸೂಲ್ ತನ್ನ ಬಳಿಯಿದಿದ್ದ ಚಾಕುವಿನಿಂದ ಮುರುಳೀಧರನನ್ನು ಇರಿದು ಕೊಲೆ ಮಾಡಿ ಪರಾರಿಯಾಗಿದ್ದ.

ಇದನ್ನೂ ಓದಿ: ಹುಡುಗರೇ ಬೀ ಕೇರ್ ಫುಲ್.. ಫೇಸ್ ಬುಕ್ ನಲ್ಲಿದೆ ಹೋಮೊ ಸೆಕ್ಸ್ ಪೇಜ್!

ಮುರಳೀಧರ್ -ಕೊಲೆಯಾದ ವ್ಯಕ್ತಿ

ಕೊಲೆಯ ನಂತರ ಆಕಾಶ್ ಕಲಾಸಿಪಾಳ್ಯದಲ್ಲಿಯ ಶೌಚಾಲಯದಲ್ಲಿ ರಕ್ತದ ಕಲೆಯಾಗಿದ್ದ ಚಾಕು ಮತ್ತು ಬಟ್ಟೆಗಳನ್ನು ತೊಳೆದುಕೊಂಡಿದ್ದನು. ನಂತರ ಬಟ್ಟೆಗಳನ್ನು ಸುಟ್ಟು ಹಾಕಿದ್ದನು. ಈ ಸಂಬಂಧ ಕೆ.ಆರ್.ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

Click to comment

Leave a Reply

Your email address will not be published. Required fields are marked *